Publish Date: Mon, 31 Oct 2016 (09:36 IST)
Updated Date: Mon, 31 Oct 2016 (09:39 IST)
ಮುಂಬೈ: ಏ ದಿಲ್ ಹೇ ಮುಷ್ಕಿಲ್ ಚಿತ್ರದಲ್ಲಿ ರಣಬೀರ್ ಕಪೂರ್ ಅಭಿನಯಕ್ಕೆ ಸೂಪರ್ ಸ್ಟಾರ್ ಅಮೀರ್ ಖಾನ್ ಫುಲ್ ಫಿದಾ ಆಗಿದ್ದಾರೆ. ರಣಬೀರ್ ನಟನೆ ನೋಡಿ ಆತ ಬೆಸ್ಟ್ ಆಕ್ಟರ್ ಎಂದು ಹೊಗಳಿದ್ದಾರೆ.
ಕರಣ್ ಜೋಹರ್ ನಿರ್ಮಾಣದ ಚಿತ್ರ ನೋಡಲೇಬೇಕಾದ ಚಿತ್ರ ಎಂದು ಅಮೀರ್ ಹೇಳಿದ್ದಾರೆ. “ಈಗಷ್ಟೇ ಏ ದಿಲ್ ಹೇ ನೋಡಿದೆ. ಎಂತಹಾ ಸಿನಿಮಾ ಅದು. ನಿಜವಾಗಿಯೂ ಇಷ್ಟವಾಯ್ತು. ರಣಬೀರ್ ಅತ್ಯುತ್ತಮ ನಟ. ನೋಡಲೇ ಬೇಕಾದ ಸಿನಿಮಾ” ಎಂದು ಹೊಗಳಿಕೆಯ ಸುರಿಮಳೆ ಮಾಡಿದ್ದಾರೆ.
ತಮ್ಮ ಸಾಮಾಜಿಕ ಜಾಲತಾಣದಲ್ಲಿ ಐಶ್ವರ್ಯಾ, ಕರಣ್ ಜೋಹರ್ ಮತ್ತು ಅನುಷ್ಕಾ ಶರ್ಮಾರನ್ನು ಹೊಗಳುವುದನ್ನು ಮರೆಯಲಿಲ್ಲ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ