ಡಾ. ಶಿವರಾಜ್ ಕುಮಾರ್ ಅವರು ಸಂತ ಕಬೀರ ಸಿನಿಮಾದಲ್ಲಿ ಅಭಿನಯಿಸುತ್ತಿರೋದು ನಿಮಗೆಲ್ಲಾ ಗೊತ್ತೆ ಇದೆ. ಇದೀಗ ಶಿವಣ್ಣ ಅಭಿನಯದ ಸಂತೆಯಲ್ಲಿ ನಿಂತ ಕಬೀರ ಸಿನಿಮಾದ ಆಡಿಯೋ ರಿಲೀಸ್ ಆಗಿದ್ದು ಸಿನಿಮಾದ ಹಾಡುಗಳು ಭಾರೀ ಸದ್ದು ಮಾಡುತ್ತಿವೆ. ತುಂಬಾನೇ ಢಿಫರೆಂಟ್ ಆಗಿರುವ ಹಾಡುಗಳು ಅಭಿಮಾನಿಗಳ ದಿಲ್ ಕದ್ದಿವೆ.
ಸಂತೆಯಲ್ಲಿ ನಿಂತ ಕಬೀರ ಸಿನಿಮಾ ಶಿವಣ್ಣ ಅಭಿನಯಿಸುತ್ತಿರುವ ವಿಭಿನ್ನವಾದ ಸಿನಿಮಾ. ಇದುವೆರೆಗೂ ತಾನು ನಿರ್ವಹಿಸದೇ ಇರುವಂತಹ ಪಾತ್ರವನ್ನು ಶಿವರಾಜ್ ಕುಮಾರ್ ಅವರು ಈ ಸಿನಿಮಾದಲ್ಲಿ ಮಾಡಿದ್ದಾರೆ. ಈ ಡಾ.ರಾಜ್ ಕುಮಾರ್ ಮಹಾತ್ಮ ಕಬೀರನಾಗಿ ದೋಹಾಗಳನ್ನ ಹೇಳಿದ್ರು. ಇದೀಗ ಇದೇ ಹಾದಿಯಲ್ಲಿ ಅಣ್ಣಾವ್ರ ಮಗ ಶಿವಣ್ಣ ಕೂಡ ಸಾಗುತ್ತಿದ್ದಾರೆ. ಸೂಫಿ ಸಂತನಾಗಿ ಅಭಿನಯಿಸುತ್ತಿದ್ದಾರೆ.ಅಂದ್ಹಾಗೆ ಈಗಾಗಲೇ ರಿಲೀಸ್ ಆಗಿರುವ ಸಂತ ಕಬೀರ ಸಿನಿಮಾದ ಹಾಡುಗಳು ಸಿಕ್ಕಾಪಟ್ಟೆ ಸದ್ದು ಮಾಡುತ್ತಿವೆ. ಮೊನ್ನೆಯಷ್ಟೇ ರಾಕಿಂಗ್ ಸ್ಟಾರ್ ಯಶ್ ಅವರು ಸಂತ ಕಬೀರ ಸಿನಿಮಾದ ಹಾಡುಗಳನ್ನು ರಿಲೀಸ್ ಮಾಡಿದ್ರು.
ಸಿನಿಮಾದ ಹಾಡುಗಳು ಸೂಫಿ ಶೈಲಿಯಲ್ಲಿದ್ದು ತುಂಬಾನೇ ಇಂಪಾಗಿವೆ. ಸಿನಿಮಾದಲ್ಲಿ ತಮಿಳು ನಟ ಶರತ್ ಬಾಬು ಅವರು ವಿಶೇಷವಾದ ಪಾತ್ರವನ್ನು ನಿರ್ವಹಿಸಿದ್ದಾರೆ. ಸನುಷಾ ಅನ್ನೋ ನವ ಪ್ರತಿಭೆ ಶಿವರಾಜ್ ಕುಮಾರ್ ಅವರಿಗೆ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ.ಸಂಜನಾ ಕೂಡ ವಿಶೇಷವಾದ ಪಾತ್ರವನ್ನು ಮಾಡಿದ್ದಾರೆ. ಇಂದ್ರಬಾಬು ಈ ಸಿನಿಮಾವನ್ನು ನಿರ್ದೇಶನ ಮಾಡಿದ್ದಾರೆ.