1989ರಲ್ಲಿ ತೆರೆ ಕಂಡ ಸುಭಾಷ್ ಘಾಯ್ ನಿರ್ದೇಶನದ ರಾಮ್ ಲಖನ್ ಸಿನಿಮಾ ಬಾಲಿವುಡ್ ಇತಿಹಾಸದಲ್ಲಿ ಒಂದು ಮೈಲಿಗಲ್ಲನ್ನು ಸೃಷ್ಟಿಸಿತ್ತು. ಇದೀಗ ದಿಲ್ ವಾಲೇ ಸಿನಿಮಾ ನಿರ್ದೇಶಕ ರೋಹಿತ್ ಶೆಟ್ಟಿ ಅವರು ಈ ಸಿನಿಮಾದ ಸೀಕ್ವೆಲ್ ಮಾಡೋದಕ್ಕೆ ಮುಂದಾಗಿದ್ದಾರಂತೆ.
ರಣ್ ವೀರ್ ಸಿಂಗ್ ಹಾಗೂ ಶಾಹೀದ್ ಕಪೂರ್ ಅವರು ಸಿನಿಮಾದಲ್ಲಿ ಅಭಿನಯಿಸುತ್ತಾರೆ ಅಂತಾ ಹೇಳಲಾಗುತ್ತಿದೆ.ರಾಮ್ ಲಖನ್ ಸಿನಿಮಾದಲ್ಲಿ ಅನಿಲ್ ಕಪೂರ್ ಅವರು ಲಖಾನ್ ಆಗಿ ಕಾಣಿಸಿಕೊಂಡಿದ್ದರು. ಇದೀಗ ರೋಹಿತ್ ಶೆಟ್ಟಿ ಅವರು ಈ ಸಿನಿಮಾದ ಸೀಕ್ವೆಲ್ ಮಾಡುತ್ತಾರೆ ಅನ್ನೋದಕ್ಕೆ ಪ್ರತಿಕ್ರಿಯಿಸಿರುವ ಅನಿಲ್ ಕಪೂರ್ ಅವರು ನನ್ನನ್ನು ಹೊರತಾಗಿ ಯಾರೂ ಕೂಡ ಲಖನ್ ಪಾತ್ರವನ್ನು ಅಷ್ಟು ಸುಂದರವಾಗಿ ನಿರ್ವಹಿಸುತ್ತಿರಲ್ಲಿಲ್ಲ. ನಾನು ಆ ಪಾತ್ರವನ್ನು ತುಂಬಾ ಚೆನ್ನಾಗಿ ನಿಭಾಯಿಸಿದ್ದೇನೆ ಅಂತಾ ಅವರು ಹೇಳಿದ್ದಾರೆ. ಆ ಮೂಲಕ ತನ್ನನ್ನುತಾನು ಹೊಗಳಿಕೊಂಡಿದ್ದಾರೆ ಅನಿಲ್ ಕಪೂರ್.
ಇನ್ನು ಈ ಸಿನಿಮಾದಲ್ಲಿ ರಣ್ ವೀರ್ ಸಿಂಗ್ ಹಾಗೂ ತನ್ನ ಮಗಳು ಸೋನಮ್ ಕಪೂರ್ ಜೊತೆಯಾಗಿ ಅಭಿನಯಿಸಬೇಕು ಅನ್ನೋ ಆಸೆ ಇದೆ ಅಂದಿರುವ ಅನಿಲ್ ಕಪೂರ್ ಅವರು ಈ ಸಿನಿಮಾಕ್ಕೆ ರಣ್ ವೀರ್ ಸಿಂಗ್ ಅವರು ಉತ್ತಮ ಆಯ್ಕೆ ಅಂತಾ ರಣ್ ವೀರ್ ಪರ ಬ್ಯಾಟಿಂಗ್ ಮಾಡಿದ್ದಾರೆ.ಆದ್ರೆ ಇವರಿಬ್ಬರು ಜೊತೆಯಾಗಿ ಅಭಿನಯಿಸುತ್ತಾರಾ ಕಾದು ನೋಡ್ಬೇಕು..