ಕಿಲಾಡಿ ಅಕ್ಷಯ್ ಕುಮಾರ್ ಅವರು ತಮ್ಮ ಅಭಿಮಾನಿಗಳಲ್ಲಿ ಕ್ಷಮೆಯಾಚಿಸಿದ್ದಾರೆ. ಮೊನ್ನೆ ನಡೆದ ಘಟನೆ ಅನಿರೀಕ್ಷಿತ ಅದು ನನ್ನ ಗಮನಕ್ಕೆ ಬಾರದೇ ನಡೆದಂತಹ ಘಟನೆ.ಹಾಗಾಗಿ ಯಾರು ಕೂಡ ಈ ಬಗ್ಗೆ ಬೇಸರಿಸಿಕೊಳ್ಳಬಾರದು. ನನ್ನನ್ನು ಕ್ಷಮಿಸಿ ಅಂತಾ ಅವರು ಹೇಳೋ ಮೂಲಕ ಅಭಿಮಾನಿಗಳಲ್ಲಿ ಕ್ಷಮಿಸುವಂತೆ ಮನವಿ ಮಾಡಿದ್ದಾರೆ.
ಅಷ್ಟಕ್ಕೂ ಆಗಿದ್ದು ಏನಪ್ಪಾ ಅಂದ್ರೆ ಇತ್ತೀಚೆಗೆ ವಿಮಾನ ನಿಲ್ದಾಣದಲ್ಲಿ ಅಕ್ಷಯ್ ಕುಮಾರ್ ಅವರನ್ನು ನೋಡಿ ಸಾಕಷ್ಟು ಸಂಖ್ಯೆಯಲ್ಲಿ ಅಭಿಮಾನಿಗಳು ನೆರೆದಿದ್ರು. ಈ ವೇಳೆ ನೂಕಾಟ ತಳ್ಳಾಟ ಸಂಭವಿಸಿತ್ತು. ಇದನ್ನು ಸಂಭಾಳಿಸೋದಕ್ಕೆ ಅಕ್ಷಯ್ ಕುಮಾರ್ ಅವರ ಬಾಡಿ ಗಾರ್ಡ್ ಯತ್ನಿಸಿದ್ದಾರೆ.ಆದ್ರೆ ಬಾಡಿಗಾರ್ಡ್ ಅವರಿಗೆ ಪರಿಸ್ಥಿತಿ ನಿಭಾಯಿಸಲು ಅಸಾಧ್ಯವಾದಾಗ ಅವರು ಅಭಿಮಾನಿಯೊಬ್ಬನ ಮೇಲೆ ಕೈ ಮಾಡಿದ್ದಾರೆ. ಇದು ಅಭಿಮಾನಿಗಳಲ್ಲಿ ಬೇಸರ ಮೂಡಿಸಿತ್ತು. ಈ ಘಟನೆಯಿಂದಾಗಿ ಅಕ್ಷಯ್ ಕುಮಾರ್ ಅವರು ಕೂಡ ನೊಂದುಕೊಂಡಿದ್ದರು. ಹಾಗಾಗಿ ಅವರು ಅಭಿಮಾನಿಗಳ ಕ್ಷಮೆಯಾಚಿಸಿದ್ದಾರೆ.
ಇನ್ನು ನನ್ನ ಬಾಡಿಗಾರ್ಡ್ ವರ್ತನೆಯಿಂದಾಗಿ ನನಗೆ ಸಾಕಷ್ಟು ಮುಜುಗರ ಉಂಟಾಗಿದೆ. ಅದಕ್ಕಾಗಿ ನಾನು ಅವನಿಗೆ ವಾರ್ನ್ ಮಾಡಿದ್ದೇನೆ ಅಂತಾ ಅಕ್ಷಯ ಕುಮಾರ್ ಅವರು ಹೇಳಿದ್ದಾರೆ. ಅಲ್ಲದೇ ನಾನು ಮತ್ತೊಮ್ಮೆ ಅಭಿಮಾನಿಗಳಲ್ಲಿ ಕ್ಷಮೆಯಾಚಿಸುತ್ತೇನೆ. ಇನ್ನೊಮ್ಮೆ ಇಂತಹ ಘಟನೆ ಮರುಕಳಿಸಲ್ಲ ಅಂತಾ ಅವರು ಹೇಳಿದ್ದಾರೆ