Select Your Language

Notifications

webdunia
webdunia
webdunia
webdunia

12 ವರ್ಷಗಳನ್ನು ಪೂರೈಸಿದ ಮೈ ಹೂ ನಾ ಸಿನಿಮಾ

12 ವರ್ಷಗಳನ್ನು ಪೂರೈಸಿದ ಮೈ ಹೂ ನಾ ಸಿನಿಮಾ
, ಸೋಮವಾರ, 2 ಮೇ 2016 (17:14 IST)
ಬಾಲಿವುಡ್ ನಲ್ಲಿ ಶಾರುಖ್ ಖಾನ್ ಅವರ ಬ್ಲಾಕ್ ಬ್ಲಸ್ಟರ್ ಸಿನಿಮಾಗಳನ್ನು ಪಟ್ಟಿ ಮಾಡುತ್ತಾ ಹೋದ್ರೆ ಅದರಲ್ಲಿ ಪ್ರಮುಖವಾದ ಸಿನಿಮಾಗಳಲ್ಲಿ ಒಂದು ಮೈ ಹೂ ನಾ ಸಿನಿಮಾ.ಶಾರುಖ್ ಖಾನ್ ಕರಿಯರ್ ಗೆ ಉತ್ತಮ ತಿರುವು ತಂದುಕೊಟ್ಟ ಸಿನಿಮಾ. ಇದೀಗ ಈ ಸಿನಿಮಾ ರಿಲೀಸ್ ಆಗಿ 12 ವರ್ಷಗಳನ್ನು ಪೂರೈಸಿದೆ.

ಮೈ ಹೂ ನಾ ಸಿನಿಮಾ ಫರ್ಹಾ ಖಾನ್  ನಿರ್ದೇಶನದ ಮೊದಲ ಸಿನಿಮಾ. ವಇಶ್ವ ಸುಂದರಿ ಸುಶ್ಮಿತಾ ಸೇನ್ ಅವರು ಈ ಸಿನಿಮಾದಲ್ಲಿ ಅಭಿನಯಿಸಿದ್ದರು.ಕಾಮಿಡಿ ಡ್ರಾಮಾ ಸಿನಿಮಾವಾಗಿರುವ ಮೈ ಹೂ ನಾ ಬಾಲಿವುಡ್ ನಲ್ಲಿ ಸಾಕಷ್ಟು ಹೆಸರು ಮಾಡಿತ್ತು. ಇನ್ನು ಸಿನಿಮಾ ರಿಲೀಸ್ ಆಗಿ 12 ವರ್ಷಗಳನ್ನು ಪೂರೈಸಿರೋದಕ್ಕೆ ನಿರ್ದೇಶಕಿ ಫರ್ಹಾ ಖಾನ್ ಸಂತಸ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಫರ್ಹಾ ಸುಶ್ಮಿತಾ ಸೇನ್ ಅವರು ನನ್ನ ಫೆವರೇಟ್ ಹಿರೋಯಿನ್ ಅಂದಿದ್ದಾರೆ. ಇನ್ನು ಇದಕ್ಕೆ ಪ್ರತಿಕ್ರಿಸಿರುವ ಶಾರುಖ್ ಖಾನ್ ಸ್ನೇಹಿತರೊಂದಿಗೆ ಸಿನಿಮಾ ಮಾಡೋದು ಅತ್ಯಂತ ಖುಷಿಯ ವಿಚಾರ ಅಂತಾ ಹೇಳಿದ್ದಾರೆ.
 
ಅಲ್ಲದೇ ಈ ಸಿನಿಮಾದ ಸೀಕ್ವೆಲ್ ಮಾಡೋಣ ಅಂತಾ ಶಾರುಖ್ ಖಾನ್  ಅವರು ಹೇಳಿದ್ದಾರೆ. ಮೈ ಹೂ ನಾ ಸಿನಿಮಾದಲ್ಲಿ ಸುಶ್ಮಿತಾ ಸೇನ್ ಅವರು ಕೆಮೆಸ್ಟ್ರಿ ಫ್ರೊಫೆಸರ್ ಆಗಿ ಕಾಣಿಸಿಕೊಂಡಿದ್ದರು. ಈ ಸಿನಿಮಾ ಫರ್ಹಾ ಖಾನ್ ಅವರ ಮೊದಲ ಸಿನಿಮಾ ಆಗಿರೋದರಿಂದ ಈ ಸಿನಿಮಾ ನನಗೆ ಅತ್ಯಂತ ಸ್ಪೆಷಲ್ ಸಿನಿಮಾ ಅಂತಾ ಅವರು ಹೇಳಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಬಿಪಾಶಾ ಹಾಗೂ ಕರಣ್ ಗ್ರೋವರ್ ಗೆ ಬಾಲಿವುಡ್ ತಾರೆಯರಿಂದ ಶುಭಾಶಯ