ಬಾಲಿವುಡ್ ನ ಮತ್ತೊಂದು ಜೋಡಿ ಇದೀಗ ದಾಂಪತ್ಯ ಜೀವನಕ್ಕ ಕಾಲಿಟ್ಟಿದೆ. ಜೋಡಿ ಹಕ್ಕಿಗಳಾಗಿ ಹಾರಾಡಿಕೊಂಡಿದ್ದ ಬಿಪಾಶಾ ಬಸು ಹಾಗೂ ಕರಣ್ ಸಿಂಗ್ ಗ್ರೋವರ್ ಅವರು ಬೆಂಗಾಳಿ ಸಂಪ್ರದಾಯದಂತೆ ಮೊನ್ನೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.ವಿವಾಹದ ಆರತಕ್ಷತೆ ಕಾರ್ಯಕ್ರಮದಲ್ಲಿ ಅನೇಕ ತಾರೆಯರು ಭಾಗವಹಿಸಿದ್ದರು.
ಬಾಲಿವುಡ್ ಮಂದಿ ಅತೀ ನಿರೀಕ್ಷೆಯಲ್ಲಿ ಕಾಯುತ್ತಿದ್ದ ವಿವಾಹಗಳಲ್ಲಿ ಒಂದು ಬಿಪಾಶಾ ಹಾಗೂ ಕರಣ್ ಸಿಂಗ್ ಗ್ರೋವರ್ ಅವರ ವಿವಾಹ . ಇವರಿಬ್ಬರ ವಿವಾಹ ಸಮಾರಂಭ ಅದ್ದೂರಿಯಾಗಿ ನಡೆಯಿತು. ಇನ್ನು ವಿವಾಹದ ಬಳಿಕ ನಡೆದ ಆರತಕ್ಷತೆ ಕಾರ್ಯಕ್ರಮದಲ್ಲಿ ಬಾಲಿವುಡ್ ಅನೇಕ ನಟ ನಟಿಯರು ಭಾಗವಹಿಸಿ ನೂತನ ದಂಪತಿಗಳಿಗೆ ಶುಭ ಹಾರೈಸಿದ್ರು. ಬಾಲಿವುಡ್ ತಾರೆಯರಾದ ಸಲ್ಮಾನ್ ಖಾನ್, ಅಭಿಷೇಕ್ ಬಚ್ಚನ್ , ಐಶ್ವರ್ಯಾ ರೈ,ಶಾರುಖ್ ಖಾನ್ , ರಣ್ ಬೀರ ಕಪೂರ್,ಅಮಿತಾಬ್ ಬಚ್ಚನ್,ಮಾಧವನ್,ಸುಶ್ಮಿತಾ ಸೇನೇ, ಸೋನಮ್ ಕಪೂರ್,ಶಮಿತಾ ಶೆಟ್ಟಿ,ರಾಜ್ ಕುಂದ್ರಾ ಹೀಗೆ ತಾರೆಯರ ದಂಡೇ ನೆರೆದಿತ್ತು.
ಇನ್ನು ವಧು ಬಿಪಾಶಾ ಹಾಗೂ ಕರಣ್ ಕ್ರೋವರ್ ಕೂಡ ವಿವಾಹದಲ್ಲಿ ಸಖತ್ತಾಗಿಯೇ ಮಿಂಚಿದ್ರು. ಬಾಲಿವು ತಾರೆಯರು ಅನೇಕರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ರಿಂದ ಆರತಕ್ಷತೆ ಕಾರ್ಯಕ್ರಮಕ್ಕೆ ವಿಶೇಷ ಕಳೆ ಬಂದಿತ್ತು. ಎಲ್ಲರೂ ಸೇರಿ ಸಖತ್ತಾಗಿಯೇ ಎಂಜಾಯ್ ಮಾಡಿದ್ರಂತೆ.