Publish Date: Sat, 29 Jul 2017 (15:02 IST)
Updated Date: Sat, 29 Jul 2017 (15:04 IST)
ಪ್ರಥಮ್, ಭುವನ್ ವಿವಾದ ಬಳಿಕ ಸ್ಯಾಂಡಲ್ ವುಡ್`ನಲ್ಲಿ ಮತ್ತೊಂದು ವಿವಾದ ಹೊಗೆಯಾಡುತ್ತಿದೆ. ಸೂಪರ್ ಟಾಕ್ ಟೈಮ್ ಸಿನಿಮಾದಲ್ಲಿ ದರ್ಶನ್ ಬಗ್ಗೆ ನಟಿ ಸಂಜನಾ ಮಾಡಿದ್ದಾರೆನ್ನಲಾದ ಕಾಮೆಂಟ್ ಭಾರೀ ವಿವಾದ ಸೃಷ್ಟಿಸಿದೆ.
ದರ್ಶನ್ ಸಿನಿಮಾದಲ್ಲಿ ಬಿಲ್ಡಪ್ ಜಾಸ್ತಿ ಇರುತ್ತೆ ಎಂಬ ಹೇಳಿಕೆ ಅವರ ಅಭಿಮಾನಿಗಳ ಕಣ್ಣು ಕೆಂಪಗಾಗಿಸಿದೆ. ಸೋಶಿಯಲ್ ಮೀಡಿಯಾದಲ್ಲಿ ಸಂಜನಾ ಕ್ಷಮೆ ಯಾಚಿಸಬೇಕೆಂದು ಅಭಿಮಾನಿಗಳು ಟ್ರೋಲ್ ಮಾಡಿದ್ದಾರೆ. ಈ ಬಗ್ಗೆ ಖಾಸಗಿ ಚಾನಲ್`ಗೆ ಪ್ರತಿಕ್ರಿಯಿಸಿರುವ ಸಂಜನಾ ನಾನು ಯಾವುದೇ ಕಾರಣಕ್ಕೂ ಕ್ಷಮೆ ಕೇಳುವುದಿಲ್ಲ. ಅದು ನನ ಅಭಿಪ್ರಾಯ ಎಂದು ಸ್ಪಷ್ಟಪಡಿಸಿದ್ದಾರೆ.
ಇದೇವೇಳೆ, ನಾನು ನನ್ನ ಅಭಿಪ್ರಾಯ ತಿಳಿಸಿದ್ದೇನೆ. ದರ್ಶನ್ ಅವರ ಭೇಟಿಗೆ ಅವಕಾಶ ಸಿಕ್ಕಾಗ ನಡೆದ ವಿಷಯವನ್ನ ಅವರಿಗೆ ತಿಳಿಸುತ್ತೇನೆ ಎಂದು ಸ್ಪಷ್ಟಪಡಿಸಿದ್ದಾರೆ. ಈ ಹಿಂದೆ ರಶ್ಮಿಕಾ ಮಂದಣ್ಣ, ಯಶ್ ಶೋ ಆಪ್ ಮಾಡುತ್ತಾರೆ ಎಂದು ಹೇಳಿಕೆ ನೀಡಿ ಟೀಕೆಗೆ ಗುರಿಯಾಗಿದ್ದರು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ