Publish Date: Sat, 29 Jul 2017 (14:33 IST)
Updated Date: Sat, 29 Jul 2017 (14:40 IST)
ಜಲ್ ಪಾಯ್ ಗುರಿಯ ಮಕ್ಕಳ ಕಳ್ಳಸಾಗಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪಶ್ಚಿಮ ಬಂಗಾಳ ಸಿಐಡಿ ಪೊಲೀಸರು ನಟಿ, ಬಿಜೆಪಿ ರಾಜ್ಯಸಭಾ ಸದಸ್ಯೆ ರೂಪಾ ಗಂಗೂಲಿ ಅವನ್ನ ವಿಚಾರಣೆಗೊಳಪಡಿಸಿದ್ದಾರೆ.
ದಕ್ಷಿಣ ಕೋಲ್ಕತ್ತಾದಲ್ಲಿರುವ ರೂಪಾ ಗಂಗೂಲಿ ಮನೆಗೆ ತೆರಳಿದ್ದ ಅಧಿಕಾರಿಗಳ ತಂಡ ವಿಚಾರಣೆಗೊಳಪಡಿಸಿದೆ. ಪ್ರಕರಣದಲ್ಲಿ ಬಂಧನಕ್ಕೀಡಾಗಿರುವ ಬಿಜೆಪಿ ಮಹಿಳಾ ಘಟಕದ ಪ್ರಧಾನ ಕಾರ್ಯದರ್ಶಿ ಜೂಹಿ ಚೌಧರಿ ಅವರನ್ನ ಭೇಟಿ ಮಾಡಿದ್ದರ ಸಂಬಂದ ವಿಚಾರಣೆಗೊಳಪಡಿಸಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿರುವುದಾಗಿ ವರದಿಯಾಗಿದೆ.
ಪುಟ್ಟ ಮಕ್ಕಳನ್ನ ಅಕ್ರಮವಾಗಿ ವಿದೇಶಿಯರಿಗೆ ಮಾರಾಟ, ದತ್ತು ನೀಡುತ್ತಿದ್ದ ದಂಧೆಯಲ್ಲಿ ಸಿಐಡಿ ವರ್ಷಾರಂಭವನ್ನ ಭೇದಿಸಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಜೂಹಿ ಚೌಧರಿ ಜೊತೆಗಿನ ಸಂಬಂಧ ಮತ್ತಿತರ ವಿಷಯಗಳ ಬಗ್ಗೆ ರೂಪಾ ಅವರ ವಿಚಾರಣೆ ನಡೆದಿದೆ. ಇದೇ ಪ್ರಕರಣದಲ್ಲಿ ಬಿಜೆಪಿ ಪ್ರಧಾನ ಕಾರ್ಯದರ್ಶಿ ಕೈಲಾಶ್ ವಿಜಯ್ ವಾರ್ಗಿಯಾಗೂ ಸಮನ್ಸ್ ನೀಡಲಾಗಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ