Webdunia - Bharat's app for daily news and videos

Install App

ಸ್ಯಾಂಡಲ್‌ವುಡ್‌ನ ಖ್ಯಾತ ನಿರ್ದೇಶಕ ಗುರುಪ್ರಸಾದ್ ಆತ್ಮಹತ್ಯೆಗೆ ಶರಣು

Sampriya
ಭಾನುವಾರ, 3 ನವೆಂಬರ್ 2024 (12:15 IST)
Photo Courtesy X
ಸ್ಯಾಂಡಲ್‌ವುಡ್‌ ಖ್ಯಾತ ನಿರ್ದೇಶಕ, ನಟ ಗುರುಪ್ರಸಾದ್‌ ನೇಣಿಗೆ ಶರಣಾಗಿರುವ ಘಟನೆ ಇಂದು ಬೆಳಕಿಗೆ ಬಂದಿದೆ. ಅಕ್ಕಪಕ್ಕದವರು ಮನೆಯಲ್ಲಿ ವಾಸನೆ ಬರುತ್ತಿದೆ ಎಂದು ನೋಡಿದಾಗ ಗುರುಪ್ರಸಾದ್ ನೇಣಿಗೆ ಶರಣಾಗಿರುವುದು ತಿಳಿದುಬಂದಿದೆ.

ಮಠ, ಎದ್ದೇಳು ಮಂಜುನಾಥ, ರಂಗನಾಯಕ, ಡೈರೆಕ್ಟರ್ ಸ್ಪೆಷಲ್  ಸಿನಿಮಾಗಳನ್ನು ನಿರ್ದೇಶನ ಮಾಡಿದ್ದಾರೆ.  ನೇರ ಮಾತು, ವಿವಾದಾತ್ಮಕ ಹೇಳಿಕೆಯಿಂದ ಗುರುತಿಸಿಕೊಂಡಿದ್ದ ಗುರುಪ್ರಸಾದ್ ಅವರು ಅನೇಕ ರಿಯಾಲಿಟಿ ಶೋಗಳಲ್ಲಿ ಜಡ್ಜ್‌ ಆಗಿ, ಬಿಗ್‌ಬಾಸ್‌ ಸೀಸನ್ 2ರಲ್ಲಿ ಸ್ಪರ್ಧಿಯಾಗಿ ಭಾಗವಹಿಸಿದ್ದರು.

ಕಳೆದ 8 ತಿಂಗಳಿನಿಂದ ಬೆಂಗಳೂರಿನ ಅಪಾರ್ಟ್‌ಮೆಂಟ್‌ನಲ್ಲಿ ವಾಸವಿದ್ದರು. ಪ್ರಾಥಮಿಕ ಮಾಹಿತಿ ಪ್ರಕಾರ ಸಾಲಗಾರರ ಕಿರುಕುಳಕ್ಕೆ ಬೇಸತ್ತು ಗುರುಪ್ರಸಾದ್ ಆತ್ಮಹತ್ಯೆ ಶರಣಾಗಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಆರ್ಥಿಕ ಸಂಕಷ್ಟವೇ ಇವರ ಸಾವಿಗೆ ಕಾರಣ ಎನ್ನಲಾಗಿದೆ.

ಮೊದಲ ಪತ್ನಿಯಿಂದ ದೂರವಾದ ಗುರುಪ್ರಸಾದ್ ಅವರು ಈಚೆಗೆ ಎರಡನೇ ಮದುವೆ ಮಾಡಿಕೊಂಡಿದ್ದರು. ಈಚೆಗೆ ಇವರ ಯಾವುದೇ ಸಿನಿಮಾಗಳು ಹಿಟ್‌ ಆಗಿರಲಿಲ್ಲ. ಅದಲ್ಲದೆ ಸಾಕಷ್ಟು ಸಾಲವನ್ನು ಮಾಡಿಕೊಂಡಿದ್ದರು. ಸ್ಥಳಕ್ಕೆ ಮಾದನಾಯಕಹಳ್ಳಿ ಪೊಲೀಸರ ತಂಡ ಆಗಮಿಸಿ, ತನಿಖೆ ಆರಂಭಿಸಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಹೀರೋ ಆಗುವವರೆಗೆ ಫ್ಯಾನ್ಸ್ ಬೇಕು, ಆದ ಮೇಲೆ ಬರ್ತ್ ಡೇ ಆಚರಿಸಲು ಬೇಡ: ನಟ ಗಣೇಶ್ ಟ್ರೋಲ್

ನಟಿ ಶೆಫಾಲಿ ಜರಿವಾಲಾ ಸಾವಿಗೆ ನಿಜ ಕಾರಣ ಕೊನೆಗೂ ಬಯಲು

ಸೌಂದರ್ಯವನ್ನು ಕಾಪಾಡಲು ಹೋಗಿ ಕೊನೆಯುಸಿರೆಳೆದ್ರಾ ಕಾಂಟ ಲಗಾ ಸುಂದರಿ

ಇದು ಹೋಗುವ ಸಮಯವಲ್ಲ: ಶೆಪಾಲಿ ಸಾವಿನ ಬಗ್ಗೆ ಸ್ನೇಹಿತೆ ಆರತಿ ಸಿಂಗ್ ಭಾವುಕ ಪೋಸ್ಟ್‌

ಕಿಚ್ಚ ಸುದೀಪ್ ಮುಂದಿನ ಸಿನಿಮಾ ಬಗ್ಗೆ ಗುಡ್ ನ್ಯೂಸ್

ಮುಂದಿನ ಸುದ್ದಿ
Show comments