Webdunia - Bharat's app for daily news and videos

Install App

ಕಮಲ್‌ ಹಾಸನ್‌ ಪರ ಸ್ಯಾಂಡಲ್‌ವುಡ್‌ ಕ್ವೀನ್‌ ಬ್ಯಾಟಿಂಗ್‌: ಥಗ್ ಲೈಫ್ ಸಿನಿಮಾ ಬ್ಯಾನ್‌ಗೆ ರಮ್ಯಾ ತೀಷ್ಣ ಪ್ರತಿಕ್ರಿಯೆ

Sampriya
ಶುಕ್ರವಾರ, 30 ಮೇ 2025 (14:21 IST)
Photo Courtesy X
ಬೆಂಗಳೂರು: ಕಾಲಿವುಡ್‌ ಹಿರಿಯ ನಟ ಕಮಲ್‌ ಹಾಸನ್‌ ಅವರು ಕನ್ನಡದ ಕುರಿತು ಹೇಳಿರುವ ವಿವಾದಾತ್ಮಕ ಹೇಳಿಕೆ ಕುರಿತು ರಾಜ್ಯದಲ್ಲಿ ಆಕ್ರೋಶ ಉಂಟಾಗಿದೆ. ಅದರ ಬೆನ್ನಲ್ಲೇ ಕಮಲ್‌ ಅಭಿನಯದ ಚಿತ್ರಕ್ಕೂ ರಾಜ್ಯದಲ್ಲಿ ನಿಷೇಧ ಭೀತಿ ಎದುರಾಗಿದೆ. ಈ ಮಧ್ಯೆ ಸ್ಯಾಂಡಲ್‌ವುಡ್‌ ಕ್ವೀನ್‌ ರಮ್ಯಾ ಪ್ರತಿಕ್ರಿಯಿಸಿದ್ದಾರೆ. 

ಮೇ 27ರಂದು ಥಗ್ ಲೈಫ್ ಸಿನಿಮಾದ ಪ್ರಚಾರಕ್ಕಾಗಿ ಚಿತ್ರತಂಡ ಬೆಂಗಳೂರಿಗೆ ಆಗಮಿಸಿತ್ತು. ಸಿನಿಮಾದ ನಾಯಕ ಕಾಲಿವುಡ್ ನಟ ಕಮಲ್ ಹಾಸನ್ ಅವರು ಕೂಡ ಆಗಮಿಸಿದ್ದರು. ಈ ವೇಳೆ ಕಮಲ್ ಹಾಸನ್ ತಮಿಳಿನಿಂದ ಕನ್ನಡ ಹುಟ್ಟಿದ್ದು ಎಂದು ಹೇಳಿಕೆ ನೀಡುವ ಮೂಲಕ ವಿವಾದ ಹುಟ್ಟುಹಾಕಿದ್ದರು. 

ತಮಿಳಿನಿಂದ ಕನ್ನಡ ಹುಟ್ಟಿತು ಎಂದು ನಟ ಕಮಲ್ ಹಾಸನ್ ಅವರು ನೀಡಿರುವ ಹೇಳಿಕೆ ವಿವಾದ ಸ್ವರೂಪ ಪಡೆದುಕೊಂಡಿದೆ. ಈ ಮಧ್ಯೆ ಕಮಲ್ ಪರ ನಟಿ ರಮ್ಯಾ ಅವರು ಬ್ಯಾಟ್ ಬೀಸಿದ್ದಾರೆ.

ಕಮಲ್ ಹಾಸನ್ ಅವರು ಅನುಚಿತವಾಗಿ ಮಾತನಾಡಿರೋದು ನಿಜವೇ? ಹಾಗಂದ ಮಾತ್ರಕ್ಕೆ ಅವರ ಸಿನಿಮಾ ನಿಷೇಧಿಸುವುದು ಸ್ವಲ್ಪ ಅತಿರೇಕ ಅನಿಸುವುದಿಲ್ಲವೇ? ನಾವೆಲ್ಲ ಒಟ್ಟಾಗಿ ಹಿಂದಿ ಹೇರಿಕೆ ವಿರುದ್ಧ ಹೋರಾಡಬೇಕು. ಆದರೆ, ಅದಕ್ಕೂ ಮುನ್ನ ಪರಸ್ಪರರಿಗೆ ಗೌರವ ಕೊಡುವುದನ್ನು ಕಲಿಯಬೇಕು ಎಂದು ರಮ್ಯಾ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಸ್ಟೋರಿಯೊಂದನ್ನ ಹಂಚಿಕೊಂಡಿದ್ದಾರೆ.

ದ್ರಾವಿಡ ಭಾಷೆಗಳ ಚಾರ್ಚ್‌ನ್ನೂ ಪೋಸ್ಟ್ ಮಾಡಿರುವ ಅವರು, ಕನ್ನಡ, ತಮಿಳು, ತೆಲುಗು ಮತ್ತು ಮಲಯಾಳಂ ಎಲ್ಲವೂ ದ್ರಾವಿಡ ಭಾಷೆಗಳ ಒಂದೇ ಕೊಂಡಿಯಡಿಯಲ್ಲಿ ಬರುತ್ತವೆ. ಆದರೆ, ನಮ್ಮಲ್ಲಿನ ಕೆಲವು ಸಾಮಾನ್ಯತೆ ಮತ್ತು ಹಂಚಿಕೆಯಾಗಿರುವ ಭಾಷಾ ವಂಶಾವಳಿ ಬೇರೆ ಇರಬಹುದು. ಅವರೆಡೂ ಶ್ರೇಷ್ಠವಲ್ಲ. ಸಂಸ್ಕೃತ ಎಲ್ಲಾ ಭಾಷೆಗಳ ತಾಯಿ ಎಂದು ಭಾವಿಸುವವರಿಗೆ ನೀವು ಕೂಡ ತಪ್ಪಾಗಿ ಕಾಣಿಸಿಸುತ್ತಿದ್ದೀರಿ. ಏಕೆಂದರೆ ಸಂಸ್ಕೃತ ಇಂಡೋ ಆರ್ಯನ್‌ ಭಾಷೆ. ನಾವು ದ್ರಾವಿಡರು, ಎರಡೂ ಪರಸ್ಪರ ಭಿನ್ನ ಎಂದು ಹೇಳಿದ್ದಾರೆ. 

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಸದ್ದಿಲ್ಲದೆ ಕಿಂಗ್‌ ಸಿನಿಮಾ ಶೂಟಿಂಗ್: ಸ್ಟಂಟ್ ಮಾಡುತ್ತಿದ್ದ ಬಾಲಿವುಡ್‌ ಬಾದ್‌ಶಾ ಬೆನ್ನಿಗೆ ಗಾಯ

ಗಣಿ ದಣಿ ಜನಾರ್ಧನ ರೆಡ್ಡಿ ಪುತ್ರ ಕಿರೀಟಿ ಜ್ಯೂನಿಯರ್ ಮೊದಲ ದಿನದ ಗಳಿಕೆ ಇಷ್ಟು

ನಟನಾಗಿ ಗೆದ್ದ ಯುವ ರಾಜ್ ಕುಮಾರ್: ಎಕ್ಕ ಸಿನಿಮಾ ಮೊದಲ ದಿನದ ಗಳಿಕೆಯೆಷ್ಟು

43ನೇ ಹುಟ್ಟು ಹಬ್ಬದ ಸಂಭ್ರಮದಲ್ಲಿ ಪ್ರಿಯಾಂಕಾ ಚೋಪ್ರಾ, ಬೀಚ್‌ನಲ್ಲಿ ಪತಿ ಜತೆ ಬರ್ತಡೇ ಸೆಲೆಬ್ರೇಟ್‌

ಭಾಗ್ಯಲಕ್ಷ್ಮೀ ಸೀರಿಯಲ್‌, ಎಲ್ಲ ಗೊತ್ತಿರುವ ಕುಸುಮಾಗೆ ಆಷಾಢದಲ್ಲಿ ಮದುವೆ ಮಾಡ್ಬಾರ್ದು ಅಂತ ಗೊತ್ತಿಲ್ವಾ, ಟ್ರೋಲ್‌

ಮುಂದಿನ ಸುದ್ದಿ
Show comments