Select Your Language

Notifications

webdunia
webdunia
webdunia
webdunia

ಮತದಾನ ಮುಗಿದ ತಕ್ಷಣ ಸ್ಯಾಂಡಲ್ ವುಡ್ ನಲ್ಲಿ ಸಿನಿಮಾ ರಿಲೀಸ್ ಗೆ ಕ್ಯೂ

Vijay Raghavendra

Krishnaveni K

ಬೆಂಗಳೂರು , ಗುರುವಾರ, 9 ಮೇ 2024 (09:55 IST)
Photo Courtesy: Instagram
ಬೆಂಗಳೂರು: ಚುನಾವಣೆಯ ಅಬ್ಬರದ ನಡುವೆ ಸ್ಯಾಂಡಲ್ ವುಡ್ ಸಿನಿಮಾಗಳು ರಿಲೀಸ್ ಆಗದೇ ತಣ್ಣಗೆ ಕುಳಿತಿದ್ದವು. ಇದೀಗ ಮತ್ತೆ ಗಾಂಧಿನಗರದಲ್ಲಿ ಚಟುವಟಿಕೆ ಶುರುವಾಗಲಿದೆ. ಹಲವು ಸಿನಿಮಾಗಳು ರಿಲೀಸ್ ಗೆ ರೆಡಿಯಾಗಿ ನಿಂತಿವೆ. ಯಾವೆಲ್ಲಾ ಸಿನಿಮಾಗಳು ಸದ್ಯದಲ್ಲೇ  ರಿಲೀಸ್ ಆಗುತ್ತಿವೆ ನೋಡಿ.

ಕಳೆದ ವಾರ ಆದಿತ್ಯ, ರಂಜಿನಿ ರಾಘವನ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದ ಕಾಂಗರೂ ಸಿನಿಮಾ ರಿಲೀಸ್ ಆಗಿತ್ತು. ಆದರೆ ಚುನಾವಣೆಯ ಅಬ್ಬರದಲ್ಲಿ ಈ ಸಿನಿಮಾ ಅಷ್ಟೊಂದು ಸುದ್ದಿ ಮಾಡಲಿಲ್ಲ. ಈಗ ಮತ್ತಷ್ಟು ಸಿನಿಮಾಗಳು ರಿಲೀಸ್ ಗೆ ರೆಡಿಯಾಗಿ ನಿಂತಿವೆ.

ಗ್ರೇ ಗೇಮ್ಸ್
ಸ್ಯಾಂಡಲ್ ವುಡ್ ನಲ್ಲಿ ಬ್ರೇಕ್ ಇಲ್ಲದೇ ಒಂದಾದ ಮೇಲೊಂದರಂತೆ ಸಿನಿಮಾ ನೀಡುವ ಹೆಗ್ಗಳಿಕೆ ವಿಜಯ್ ರಾಘವೇಂದ್ರ ಅವರದ್ದು. ಇದೀಗ ವಿಜಿ ನಾಯಕರಾಗಿರುವ ಗ್ರೇ ಗೇಮ್ಸ್ ಸಿನಿಮಾ ರಿಲೀಸ್ ಗೆ ರೆಡಿಯಾಗಿ ನಿಂತಿದೆ. ನಾಳೆ ಗ್ರೇ ಗೇಮ್ಸ್ ಬಿಡುಗಡೆಯಾಗುತ್ತಿದ್ದು ಶ್ರುತಿ ಪ್ರಕಾಶ್, ಭಾವನಾ ರಾವ್ ಮೊದಲಾದವರು ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.

ರಾಮನ ಅವತಾರ
ಸ್ಯಾಂಡಲ್ ವುಡ್ ನ ಭರವಸೆಯ ನಟ ರಿಷಿ ಮತ್ತು ಪ್ರಣೀತಾ ಸುಭಾಷ್ ಪ್ರಮುಖ ಪಾತ್ರದಲ್ಲಿ ರಾಮನ ಅವತಾರ ಸಿನಿಮಾ ನಾಳೆ ರಿಲೀಸ್ ಆಗುತ್ತಿದೆ. ಹಾಸ್ಯ ಭರಿತ ಕತೆ ಹೊಂದಿರುವ ಸಿನಿಮಾ ವೀಕ್ಷಕರಿಗೆ ಇಷ್ಟವಾಗಬಹುದೆಂಬ ನಿರೀಕ್ಷೆಯಿದೆ.

ಆದರೆ ಸ್ಟಾರ್ ನಟರ ಸಿನಿಮಾಗಳು ಇದುವರೆಗೆ ಬಿಡುಗಡೆಯಾಗುವ ಸುದ್ದಿ ಇಲ್ಲ. ಸ್ಟಾರ್ ನಟರ ಸಿನಿಮಾ ಬಿಡುಗಡೆಯಾಗದೇ ಥಿಯೇಟರ್ ಭರ್ತಿಯಾಗದು.

Share this Story:

Follow Webdunia kannada

ಮುಂದಿನ ಸುದ್ದಿ

ಕನ್ನಡ ತೆಲುಗಿನ ಖ್ಯಾತ ಕಿರುತೆರೆ ನಟಿಯ ಹಸಿಬಿಸಿ ದೃಶ್ಯ ವೈರಲ್