ಕಿಚ್ಚ46 ಟೀಸರ್ ಡೇಟ್ ಬಹಿರಂಗಪಡಿಸಲು ಜೊತೆಯಾದ ಸ್ಯಾಂಡಲ್ ವುಡ್ ಸ್ಟಾರ್ ಗಳು

Webdunia
ಬುಧವಾರ, 28 ಜೂನ್ 2023 (08:30 IST)

ಬೆಂಗಳೂರು: ಕಿಚ್ಚ ಸುದೀಪ್ ಅವರ ಮುಂದಿನ ಸಿನಿಮಾ ಟೀಸರ್ ಲಾಂಚ್ ಯಾವಾಗ ಎಂದು ನಿನ್ನೆ ಅಧಿಕೃತ ಮಾಹಿತಿ ಹೊರಬಿದ್ದಿದೆ.

ಕಿಚ್ಚ46 ಸಿನಿಮಾ ಟೀಸರ್ ಜುಲೈ 2 ರಂದು ಬೆಳಿಗ್ಗೆ 11.46 ಕ್ಕೆ ಲಾಂಚ್ ಆಗಲಿದೆ. ವಿ ಕ್ರಿಯೇಷನ್ಸ್ ನ ಕಲೈಪುಲಿ ಎಸ್. ಧಾನು ನಿರ್ಮಾಣದಲ್ಲಿ ಸಿನಿಮಾ ಮೂಡಿಬರಲಿದೆ.

ಕಿಚ್ಚ46 ಅಪ್ ಡೇಟ್ ಗಾಗಿ ಅಭಿಮಾನಿಗಳು ಸಾಕಷ್ಟು ದಿನಗಳಿಂದ ಕಾಯುತ್ತಲೇ ಇದ್ದರು. ಹೀಗಾಗಿ ಚಿತ್ರತಂಡ ವಿಶೇಷವಾಗಿ ಟೀಸರ್ ಲಾಂಚ್ ಡೇಟ್ ಬಗ್ಗೆ ಅಪ್ ಡೇಟ್ ಕೊಟ್ಟಿದೆ. ಈ ಬಗ್ಗೆ ವಿಶೇಷ ವಿಡಿಯೋ ಮಾಡಿರುವ ಚಿತ್ರತಂಡ ಇದರಲ್ಲಿ ಸ್ಯಾಂಡಲ್ ವುಡ್ ತಾರೆಯರಾದ ನಿರೂಪ್ ಭಂಡಾರಿ, ಡಾಲಿ ಧನಂಜಯ್, ಅನೂಪ್ ಭಂಡಾರಿ, ಸಪ್ತಮಿ ಗೌಡ, ಡಾರ್ಲಿಂಗ್ ಕೃಷ್ಣ ಸೇರಿದಂತೆ ಅನೇಕ ನಟರು ಭಾಗಿಯಾಗಿ ಟೀಸರ್ ಅಪ್ ಡೇಟ್ ಯಾವಾಗ ಗೊತ್ತಾ ಎಂದು ಕುತೂಹಲ ವ್ಯಕ್ತಪಡಿಸಿದ್ದಾರೆ. ಬಳಿಕ ಟೀಸರ್ ಡೇಟ್ ಬಹಿರಂಗಪಡಿಸಲಾಗಿದೆ. ಈ ವಿಶೇಷ ವಿಡಿಯೋ ಕಿಚ್ಚನಿಗೂ ಇಷ್ಟವಾಗಿದ್ದು, ಈ ವಿಡಿಯೋದಲ್ಲಿ ಭಾಗಿಯಾಗಿರುವ ತಮ್ಮ ಸಿನಿ ಸ್ನೇಹಿತರಿಗೆ ಕಿಚ್ಚ ವಿಶೇಷವಾಗಿ ಧನ್ಯವಾದ ಸಲ್ಲಿಸಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ನಟ ಮಂಜು ಮನೋಜ್ ಶುರು ಮಾಡಿರುವ ಹೊಸ ಬಿಸಿನೆಸ್ ಏನ್ ಗೊತ್ತಾ

ನೀವು ಹೋದರೂ ನಮ್ಮ ಜೊತೆಯಲ್ಲೇ ಇದ್ದೀರಾ: ಸುಮಲತಾ ಭಾವುಕಾ ಪೋಸ್ಟ್

ನಟ ಧರ್ಮೇಂದ್ರ ನಿಧನಕ್ಕೆ ರಾಷ್ಟ್ರಪತಿ, ಪ್ರಧಾನಿ ಸಂತಾಪ

ಬಾಲಿವುಡ್ ಹಿರಿಯ ನಟ ಧರ್ಮೇಂದ್ರ ವಿಧಿವಶ

ಜಸ್ಟ್ ಫ್ರೆಂಡ್ಸ್ ಎನ್ನುತ್ತಲೇ ದಾಂಪತ್ಯ ಜೀವನಕ್ಕಿಡಲು ಸಜ್ಜಾದ ಮಾನಸ ಶಿವು ಜೋಡಿ

ಮುಂದಿನ ಸುದ್ದಿ
Show comments