Select Your Language

Notifications

webdunia
webdunia
webdunia
webdunia

ಜೀವನ್‌ಸಾಥಿ ಡಾಟ್ ಕಾಮ್‍ನಲ್ಲಿ ನಟಿ ರಮ್ಯಾ!

ಜೀವನ್‌ಸಾಥಿ ಡಾಟ್ ಕಾಮ್‍ನಲ್ಲಿ ನಟಿ ರಮ್ಯಾ!
Bangalore , ಗುರುವಾರ, 12 ಜನವರಿ 2017 (13:37 IST)
ಒಮ್ಮೊಮ್ಮೆ ಹೀಗೂ ಆಗುವುದುಂಟು. ಯಾರೋ ಏನೋ ಸುಖಾ ಸುಮ್ಮನೆ ಯಾವುದೋ ನಟಿಯ ಫೋಟೋವನ್ನು ಬಳಸಿ ವಧುವರ ಅನ್ವೇಷಣಾ ಸೈಟ್‍ಗೆ ಹಾಕುವುದು ಇತ್ತೀಚಿನ ದಿನಗಳಲ್ಲಿ ಸಾಮಾನ್ಯವಾಗಿದೆ. ಇದು ಕೆಲವೊಮ್ಮೆ ವಿಕೋಪಕ್ಕೆ ಹೋಗಿ ಪೊಲೀಸ್ ಕೇಸ್ ಆಗುವ ಸಾಧ್ಯತೆಗಳೂ ಇಲ್ಲದಿಲ್ಲ. 
 
ಇದೀಗ ಕನ್ನಡದ ನಟಿ ರಮ್ಯಾ ಬಾರ್ನಾ ಅವರ ಹೆಸರು ಜೀವನ್‌ಸಾಥಿ ಡಾಟ್ ಕಾಮ್ ವೆಬ್‍ಸೈಟ್‍ನಲ್ಲಿ ಕಾಣಿಸಿಕೊಂಡಿದೆ. ಅವರ ಎತ್ತರ, ತೂಕ ಎಲ್ಲಾವೂ ಹಾಕಲಾಗಿದೆ. ಆದರೆ ಅವರ ಹೆಸರು ಮಾತ್ರ ಇಲ್ಲ. ಫೋಟೋ ಮಾತ್ರ ರಮ್ಯಾ ಬಾರ್ನಾ ಅವರದೇ ಉಪಯೋಗಿಸಿದ್ದಾರೆ.
 
ರಮ್ಯಾ ಬಾರ್ನಾ ಅವರು ನಿಜಕ್ಕೂ ಗಂಡು ಹುಡುಕುತ್ತಿದ್ದಾರಾ? ಅಥವಾ ಯಾರಾದರೂ ಕಿಡಿಗೇಡಿತನದಿಂದ ಮಾಡಿರುವ ಕೆಲಸನಾ ಇದು ಎಂಬುದು ಸ್ಪಷ್ಟವಾಗಿಲ್ಲ. ಇಲ್ಲಿರುವ ಪ್ರೊಫೈಲ್ ಗಮನಿಸಿದರೆ, ಮದುವೆ ಬಳಿಕ ಕೆಲಸ ಮಾಡಲು ಇಚ್ಛಿಸುತ್ತೇನೆ, ಸಿನಿಮಾ ನೋಡುವುದು, ಪ್ರವಾಸ, ಸಾಕುಪ್ರಾಣಿಗಳೆಂದರೆ ಇಷ್ಟ ಎಂದೂ ಹಾಕಿದ್ದಾರೆ. ಇದು ಅಸಲಿಯೇ ಅಥವಾ ನಕಲಿಯೇ ಎಂಬುದು ಇನ್ನಷ್ಟೇ ಗೊತ್ತಾಗಬೇಕು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಫೆಬ್ರವರಿಯಲ್ಲಿ ತೆರೆಕಾಣಲಿದೆ ಮಠ ಗುರುಪ್ರಸಾದ್ ಹೊಸ ಚಿತ್ರ