Select Your Language

Notifications

webdunia
webdunia
webdunia
webdunia

ಫೆಬ್ರವರಿಯಲ್ಲಿ ತೆರೆಕಾಣಲಿದೆ ಮಠ ಗುರುಪ್ರಸಾದ್ ಹೊಸ ಚಿತ್ರ

ಫೆಬ್ರವರಿಯಲ್ಲಿ ತೆರೆಕಾಣಲಿದೆ ಮಠ ಗುರುಪ್ರಸಾದ್ ಹೊಸ ಚಿತ್ರ
Bangalore , ಗುರುವಾರ, 12 ಜನವರಿ 2017 (13:24 IST)
ಮಠ ಗುರುಪ್ರಸಾದ್ ಅವರ ನಿರ್ದೇಶನದಲ್ಲಿ ಬಂದ ’ಡೈರೆಕ್ಟರ್ಸ್ ಸ್ಪೆಷಲ್’ ಚಿತ್ರ ನಿರೀಕ್ಷಿಸಿದ ಮಟ್ಟದಲ್ಲಿ ಯಶಸ್ವಿಯಾಗಲಿಲ್ಲ. ಆ ಬಳಿಕ ಗುರುಗಳು ಸೈಲೆಂಟ್ ಆದರು. ಆ ಗ್ಯಾಪಲ್ಲಿ ಬಿಗ್ ಬಾಸ್‌ ಶೋನಲ್ಲಿ ಕಾಣಿಸಿಕೊಂಡು ಒಂದಷ್ಟು ಸುದ್ದಿ ಮಾಡಿದರು. 
 
ಇದೀಗ ಅವರ ನಿರ್ದೇಶನದಲ್ಲಿ ಬರುತ್ತಿರುವ ಎರಡನೇ ಸಲ ಬಹುತೇಕ ಸಿದ್ಧವಾಗಿದೆ. ಇದೇ ಜನವರಿ 12ರಂದು ಆಡಿಯೋ ಬಿಡುಗಡೆಯಾಗುತ್ತಿದ್ದು, ಫೆಬ್ರವರಿಯಲ್ಲಿ ಚಿತ್ರವನ್ನು ತೆರೆಗೆ ತರುವ ಆಲೋಚನೆಯಲ್ಲಿದ್ದಾರೆ ಗುರುಪ್ರಸಾದ್. ಈ ಚಿತ್ರ ಒಂಥರಾ ಧನಂಜಯ್ ಅವರಿಗೂ ಗುರುಪ್ರಸಾದ್ ಅವರಿಗೂ ಸವಾಲು. ಯಾಕೆಂದರೆ ಇಬ್ಬರಿಗೂ ಈ ಚಿತ್ರದ ಗೆಲುಗು ಅನಿವಾರ್ಯ.
 
ಅನೂಪ್ ಸೀಳಿನ್ ಸಂಗೀತ ನಿರ್ದೇಶನ ಇರುವ ಈ ಚಿತ್ರದ ಪಾತ್ರವರ್ಗದಲ್ಲಿ ಧನಂಜಯ್, ಸಂಗೀತಾ ಭಟ್ ಮತ್ತು ಹಿರಿಯ ತಾರೆ ಲಕ್ಷ್ಮಿ ಪ್ರಮುಖವಾಗಿ ಅಭಿನಯಿಸಿದ್ದಾರೆ. ಕಥೆ, ಚಿತ್ರಕಥೆ, ಸಂಭಾಷಣೆ, ಸಾಹಿತ್ಯ ಹೀಗೆ ಸಮಸ್ತವನ್ನೂ ನಿಭಾಯಿಸಿದ್ದಾರೆ ಗುರುಪ್ರಸಾದ್.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ದಶಕಗಳ ಬಳಿಕ ರಾಜ್ ಕುಟುಂಬದ ಜತೆ ಕೈಜೋಡಿಸಿದ ದ್ವಾರಕೀಶ್