Select Your Language

Notifications

webdunia
webdunia
webdunia
webdunia

ದಶಕಗಳ ಬಳಿಕ ರಾಜ್ ಕುಟುಂಬದ ಜತೆ ಕೈಜೋಡಿಸಿದ ದ್ವಾರಕೀಶ್

ದಶಕಗಳ ಬಳಿಕ ರಾಜ್ ಕುಟುಂಬದ ಜತೆ ಕೈಜೋಡಿಸಿದ ದ್ವಾರಕೀಶ್
Bangalore , ಗುರುವಾರ, 12 ಜನವರಿ 2017 (13:21 IST)
ದ್ವಾರಕೀಶ್ ನಿರ್ಮಾಣದಲ್ಲಿ ಮೂಡಿಬರುತ್ತಿರುವ ’ಚೌಕ’ ಚಿತ್ರ ಹಲವಾರು ಕಾರಣಗಳಿಂದ ಗಮನಸೆಳೆಯುತ್ತಿದೆ. ಬಹುತಾರಾಗಣದ ಈ ಚಿತ್ರದ ವಿಶೇಷ ಪಾತ್ರದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಕಾಣಿಸಿಕೊಳ್ಳುತ್ತಿರುವುದು ಗೊತ್ತಿರುವ ಸಂಗತಿ. 
 
ಇದೀಗ ಈ ಚಿತ್ರಕ್ಕೆ ಇನ್ನೊಬ್ಬರು ಸ್ಟಾರ್ ಹೀರೋ ಎಂಟ್ರಿ ಕೊಟ್ಟಿದ್ದಾರೆ. ಅವರು ಬೇರಾರು ಅಲ್ಲ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್. ಚಿತ್ರದ ಹಾಡೊಂದನ್ನು ಪುನೀತ್ ಹಾಡಿದ್ದಾರೆ. ಈ ಮೂಲಕ 40 ವರ್ಷಗಳ ನಂತರ ಡಾ.ರಾಜ್ ಕುಟುಂಬದೊಂದಿಗೆ ದ್ವಾರಕೀಶ್ ಮತ್ತೆ ಕೈಜೋಡಿಸಿದಂತಾಗಿದೆ.
 
ನಲವತ್ತು ವರ್ಷಗಳ ಹಿಂದೆ ಡಾ.ರಾಜ್ ಜತೆ ’ಭಾಗ್ಯವಂತರು’ ದ್ವಾರಕೀಶ್ ಮಾಡಿದ ಕೊನೆಯ ಚಿತ್ರ. ಆ ಬಳಿಕ ಎರಡೂ ಕುಟುಂಬಗಳು ಒಟ್ಟಿಗೆ ಕೆಲಸ ಮಾಡಲಿಲ್ಲ. ಈಗ ಪುನೀತ್ ಮೂಲಕ ಮತ್ತೆ ಎರಡು ಕುಟುಂಬಗಳು ಒಂದಾಗಿವೆ. ಚೌಕ ಚಿತ್ರ ಬಹುತೇಕ ಮುಗಿದಿದ್ದು ಈ ತಿಂಗಳಾಂತ್ಯಕ್ಕೆ ತೆರೆಕಾಣಬಹುದು. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ರಿಷಬ್ ಶೆಟ್ಟಿ ಆಕ್ಷನ್ ಕಟ್‌ನಲ್ಲಿ ಕಿಚ್ಚ ಸುದೀಪ್