Select Your Language

Notifications

webdunia
webdunia
webdunia
webdunia

ರಿಷಬ್ ಶೆಟ್ಟಿ ಆಕ್ಷನ್ ಕಟ್‌ನಲ್ಲಿ ಕಿಚ್ಚ ಸುದೀಪ್

ರಿಷಬ್ ಶೆಟ್ಟಿ ಆಕ್ಷನ್ ಕಟ್‌ನಲ್ಲಿ ಕಿಚ್ಚ ಸುದೀಪ್
Bangalore , ಗುರುವಾರ, 12 ಜನವರಿ 2017 (13:10 IST)
ಕಿರಿಕ್ ಪಾರ್ಟಿ ಚಿತ್ರದ ಮೂಲಕ ರಿಷಬ್ ಶೆಟ್ಟಿ ಈಗ ಯಶಸ್ವಿ ನಿರ್ದೇಶಕ ಎನ್ನಿಸಿಕೊಂಡಿದ್ದಾರೆ. ಲಾಂಗು, ಮಚ್ಚಿನ ಸಿನಿಮಾಗಳಲ್ಲದೆ ಒಂಚೂರು ಭಿನ್ನವಾದ ಸಬ್ಜೆಕ್ಟ್‌ನೊಂದಿಗೆ ತಮ್ಮದೇ ಶೈಲಿಯಿಂದ ಜನಪ್ರಿಯವಾಗುತ್ತಿರುವ ನಿರ್ದೇಶಕ. ಈಗ ಕಿಚ್ಚ ಸುದೀಪ್‌ಗೆ ಆಕ್ಷನ್ ಕಟ್ ಹೇಳಲು ರೆಡಿಯಾಗಿದ್ದಾರೆ.
 
ಇದನ್ನು ಸ್ವತಃ ರಿಷಬ್ ಶೆಟ್ಟಿಯೇ ಖಚಿತಪಡಿಸಿದ್ದಾರೆ. ಸುದೀಪ್ ಚಿತ್ರ ನಿರ್ದೇಶಿಸುತ್ತಿರುವುದಾಗಿ ಹೇಳಿದ್ದಾರೆ. ಥಗ್ಸ್ ಆಫ್ ಮಾಲ್ಗುಡಿ ಚಿತ್ರವನ್ನು ರಿಷಬ್ ಶೆಟ್ಟಿ ನಿರ್ದೇಶಿಸಲಿದ್ದಾರೆ ಎಂಬ ಮಾತುಗಳು ಕೇಳಿಬಂದಿತ್ತು. ಈ ಹಿನ್ನೆಲೆಯಲ್ಲಿ ಸ್ಪಷ್ಟನೆ ನೀಡಿರುವ ರಿಷಬ್, ಆ ಚಿತ್ರವನ್ನು ರಕ್ಷಿತ್ ಶೆಟ್ಟಿ ನಿರ್ದೇಶಿಸಲಿದ್ದಾರೆ ಎಂದಿದ್ದಾರೆ. 
 
ಥಗ್ಸ್ ಆಫ್ ಮಾಲ್ಗುಡಿ ಚಿತ್ರದ ಬಳಿಕ ರಿಷಬ್ ಶೆಟ್ಟಿ ಚಿತ್ರದ ಜೊತೆಗಿನ ಚಿತ್ರ ಸೆಟ್ಟೇರಲಿದೆಯಂತೆ. ಸದ್ಯಕ್ಕೆ ಸುದೀಪ್ ಅವರು ’ಹೆಬ್ಬುಲಿ’ಯಾಗಿ ಪ್ರೇಕ್ಷಕರ ಮುಂದೆ ಬರುತ್ತಿದ್ದಾರೆ. ಬಹುಶಃ ಅದು ಮುಗಿದ ಮೇಲೆ ಅವರು ರಿಷಬ್ ಜತೆಗಿನ ಚಿತ್ರಕ್ಕೆ ಕೈಹಾಕಬಹುದು. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಚಿರಂಜೀವಿ ಖೈದಿ ನಂಬರ್ 150 ಆನ್‌ಲೈನಲ್ಲಿ ಲೀಕ್