Select Your Language

Notifications

webdunia
webdunia
webdunia
webdunia

ಚಿರಂಜೀವಿ ಖೈದಿ ನಂಬರ್ 150 ಆನ್‌ಲೈನಲ್ಲಿ ಲೀಕ್

ಚಿರಂಜೀವಿ ಖೈದಿ ನಂಬರ್ 150 ಆನ್‌ಲೈನಲ್ಲಿ ಲೀಕ್
Hyderabad , ಗುರುವಾರ, 12 ಜನವರಿ 2017 (10:41 IST)
ಸುಮಾರು ಹತ್ತು ವರ್ಷಗಳ ಬಳಿಕ ಬಣ್ಣಹಚ್ಚಿರುವ ಟಾಲಿವುಡ್ ಮೆಗಾಸ್ಟಾರ್ ಚಿರಂಜೀವಿ ಅಭಿನಯದ ಖೈದಿ ನಂಬರ್ 150 ಬಿಡುಗಡೆಯಾಗಿ ಬಾಕ್ಸಾಫೀಸಲ್ಲಿ ಬ್ರೇಕ್ ಡ್ಯಾನ್ಸ್ ಮಾಡುತ್ತಿದೆ. ಅಭಿಮಾನಿಗಳು ಥ್ರಿಲ್ ಆಗಿದ್ದಾರೆ. ಆದರೆ ಆ ಚಿತ್ರದ ಒಂದು ಸಂಪೂರ್ಣ ಹಾಡು ಆನ್‌ಲೈನಲ್ಲಿ ಲೀಕ್ ಆಗಿದೆ.
 
ಇತ್ತೀಚೆಗೆ ಅಮೀರ್ ಖಾನ್ ಅಭಿನಯದ ದಂಗಲ್ ಸಂಪೂರ್ಣ ಸಿನಿಮಾ ಫೇಸ್‌ಬುಕ್‌ನಲ್ಲಿ ಯಾರೋ ಲೀಕ್ ಮಾಡಿದ್ದರು. ಆ ಬಳಿಕ ಆ ಸಿನಿಮಾವನ್ನು ಅಲ್ಲಿಂದ ತೆಗೆಸಿದ್ದರು. ಇದೀಗ ಚಿರಂಜೀವಿ ಸಿನಿಮಾಗೂ ಅದೇ ತರಹ ಆಗಿದೆ. ಈ ಸಿನಿಮಾದ ಹೈಲೈಟ್ ಎಂದರೆ ಹಾಡುಗಳು.
 
ಅದರಲ್ಲೂ 10 ವರ್ಷಗಳ ಬಳಿಕ ಚಿರಂಜೀವಿ ಹೇಗೆಲ್ಲಾ ಸ್ಟೆಪ್ ಹಾಕಿದ್ದಾರೆ ಎಂಬ ಕುತೂಹಲ ಅಭಿಮಾನಿಗಳಿಗೆ ಇರುತ್ತದೆ. ಹಾಗಾಗಿ ವಿಡಿಯೋ ಹಾಡುಗಳನ್ನು ಬಿಡುಗಡೆ ಮಾಡಿರಲಿಲ್ಲ. ಆದರೆ ಯಾರೋ ಚಿತ್ರದ ವಿಡಿಯೋ ಹಾಡನ್ನು ಆನ್‌ಲೈನಲ್ಲಿ ಹಾಕಿದ್ದಾರೆ. ಇದರಿಂದ ಚಿತ್ರತಂಡ ಬೇಸರವಾಗಿದ್ದು, ಇಷ್ಟೆಲ್ಲಾ ಕಷ್ಟಪಟ್ಟು ತೆಗೆದರೂ ಕ್ಷಣಗಳಲ್ಲಿ ಆನ್‍ಲೈನಲ್ಲಿ ಲೀಕ್ ಆಗಿರುವ ಬಗ್ಗೆ ಆತಂಕ ವ್ಯಕ್ತಪಡಿಸಿದೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಡ್ರಾಮಾ ಕ್ವಿನ್ ರಾಖಿ ಸಾವಂತ್‍ಗೆ ಮದುವೆಯಂತೆ!