ಯುಗಾದಿ ಹಬ್ಬಕ್ಕೆ ಎಚ್ಚರಿಕೆಯ ಜತೆ ಶುಭ ಕೋರಿದ ತಾರೆಯರು

ಬುಧವಾರ, 25 ಮಾರ್ಚ್ 2020 (09:42 IST)
ಬೆಂಗಳೂರು: ಇಂದು ಯುಗಾದಿ ಹಬ್ಬ. ಆದರೆ ಕೊರೋನಾವೈರಸ್ ನಿಂದಾಗಿ ಹಬ್ಬದ ಕಳೆಯೇ ಮಾಸಿ ಹೋಗಿದೆ. ಜನರು ದಿನ ಕಳೆಯುವುದು ಹೇಗೆ ಎಂಬ ಚಿಂತೆಯಲ್ಲಿದ್ದಾರೆ. ಈ ನಡುವೆ ಸ್ಯಾಂಡಲ್ ವುಡ್ ತಾರೆಯರು ಶುಭಾಷಯದ ಜತೆಗೆ ಎಚ್ಚರಿಕೆಯನ್ನೂ ನೀಡಿದ್ದಾರೆ.


ಯುಗಾದಿ ಹಬ್ಬಕ್ಕೆ ಶುಭ ಕೋರಿರುವ ನಟ ಪುನೀತ್ ರಾಜ್ ಕುಮಾರ್ ಮನೆಯಲ್ಲೇ ಇರಿ, ಸೇಫ್ ಆಗಿರಿ ಎಂದಿದ್ದಾರೆ. ಈ ಬಾರಿ ಹಬ್ಬದೂಟ ಮಾಡುವ ಸ್ಥಿತಿಯಲ್ಲಿ ಅಭಿಮಾನಿಗಳಿಲ್ಲ.

ನಟ ರಮೇಶ್ ಅರವಿಂದ್, ಜಗ್ಗೇಶ್, ಅನಿರುದ್ಧ್,  ನಟಿ ತಾರಾ ಸೇರಿದಂತೆ ಅನೇಕರು ಯುಗಾದಿ ಹಬ್ಬಕ್ಕೆ ಶುಭಾಷಯ ಕೋರಿದ್ದಾರೆ. ಮನೆಯಲ್ಲೇ ಇದ್ದು ಹಬ್ಬ ಸರಳವಾಗಿ ಆಚರಿಸಿ ಎಂದೂ ಕರೆ ನೀಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಮನೆಯಲ್ಲಿ ಬೋರಾಗ್ತಿದೆಯಾ? ನೀವು ಕೇಳಿದ ಹಾಡು ಹಾಡಲಿದ್ದಾರೆ ಗಾಯಕ ವಿಜಯ್ ಪ್ರಕಾಶ್