Publish Date: Fri, 26 May 2017 (11:14 IST)
Updated Date: Fri, 26 May 2017 (11:21 IST)
ಬೆಂಗಳೂರು: ಸ್ಯಾಂಡಲ್ ವುಡ್ ತಾರೆಯರಾದ ರಾಗಿಣಿ ಮತ್ತು ಹಿರಿಯ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ಪುತ್ರ ಆದಿತ್ಯ ಕಂಠೀರವ ಸ್ಟುಡಿಯೋದಲ್ಲಿ ಮದುವೆಯಾದರು. ಇದಕ್ಕೆ ನಿರ್ಮಾಪಕ ಸಾರಾ ಗೋವಿಂದು ಸಾಕ್ಷಿಯಾದರು!
ಅರೇ ಇದೇನಿದು ಎಂದು ಸುದ್ದಿ ಓದಿ ನಿಜವಾಗಿ ಇವರ ಮದುವೆಯಾಯ್ತು ಎಂದುಕೊಳ್ಳಬೇಡಿ. ಹೊಸ ಸಿನಿಮಾವೊಂದಕ್ಕಾಗಿ ಇಬ್ಬರೂ ಮದುವೆ ಗೆಟಪ್ ನಲ್ಲಿ ಮಂಟಪದಲ್ಲಿ ಕುಳಿತುಕೊಂಡು ರೀಲ್ ನಲ್ಲಿ ಮದುವೆಯಾದರು.
ವಿಲನ್ ಎಂಬ ಸಿನಿಮಾ ನಂತರ ಈ ಜೋಡಿಯ ಮತ್ತೊಂದು ಸಿನಿಮಾ ಸೆಟ್ಟೇರಿದೆ. ಅದಕ್ಕಿನ್ನೂ ಹೆಸರಿಟ್ಟಿಲ್ಲ. ಆ ಸಿನಿಮಾದ ಮದುವೆ ದೃಶ್ಯಕ್ಕೆ ಸಾರಾ ಗೋವಿಂದು ಕ್ಲಾಪ್ ಮಾಡಿದರು. ಮುಸ್ಸಂಜೆ ಮಹೇಶ್ ನಿರ್ದೇಶನದಲ್ಲಿ ಹೊಸ ಚಿತ್ರ ಮೂಡಿಬರುತ್ತಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ