Select Your Language

Notifications

webdunia
webdunia
webdunia
webdunia

ಮಹಿಳೆಯರು ಹಾಸಿಗೆಯಲ್ಲಿ ಮಾತ್ರ ಉಪಯೋಗಕ್ಕೆ ಬರುತ್ತಾರೆಂದ ತೆಲುಗು ನಟನ ವಿರುದ್ಧ ಕೇಸ್

chalapati rao
ಹೈದ್ರಾಬಾದ್ , ಬುಧವಾರ, 24 ಮೇ 2017 (17:58 IST)
ಮಹಿಳೆಯರು ಹಾಸಿಗೆಯಲ್ಲಿ ಮಾತ್ರ ಉಪಯೋಗಕ್ಕೆ ಬರುತ್ತಾರೆ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದ ತೆಲುಗಿನ ಪ್ರಸಿದ್ಧ ಪೋಷಕ ನಟ ಚಲಪತಿ ರಾವ್ ವಿರುದ್ಧ ಕೇಸ್ ದಾಖಲಾಗಿದೆ.
 

ನಾಗಚೈತನ್ಯ ಚಿತ್ರ ಪ್ರೀರಿಲೀಸ್ ಕಾರ್ಯಕ್ರಮದಲ್ಲಿ ಮಾತನಾಡಿದ್ದ ಚಲಪತಿ ವಿವಾದಾತ್ಮಕ ಹೇಳಿಕೆ ನೀಡಿದ್ದರು. ಮಹಿಳಾ ಹೋರಾಟಗಾರ್ತಿಯ ದೂರಿನ ಮೇಲೆ ಚಲಪತಿ ವಿರುದ್ಧ ಕೇಸ್ ದಾಖಲಿಸಲಾಗಿದೆ. ಸೆಕ್ಷನ್ 509, 304ಎ ಅಡಿಯಲ್ಲಿ ಸರೂರ್ ನಗರ ಠಾಣೆಯಲ್ಲಿ ಕೇಸ್ ದಾಖಲಿಸಲಾಗಿದೆ.

ವಿವಾದ ಕುರಿತಂತೆ ವಿಡಿಯೋ ರಿಲೀಸ್ ಮಾಡಿರುವ ಚಲಪತಿರಾವ್, ನನಗೆ ಯಾರಿಗೂ ನೋವುಂಟುಮಾಡುವ ಉದ್ದೇಶವಿರಲಿಲ್ಲ. ನನ್ನ ಮಾತಿನಿಂದ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ. ನಾನು ಈ ರೀತಿಯ ಮಾತುಗಳನ್ನಾಡಲು ಸ್ಥಳೀಯ ಟಿವಿ ವರದಿಗಾರರು ಕೆಣಕಿದ್ದೇ ಕಾರಣ ಎಂದಿದ್ದಾರೆ.

ಹುಡುಗಿಯರು ಹಾನಿಕಾರಕವೇ..? ಎಂದು ಅವರು ಕೇಳಿದಾಗ. ನಾವು ಹಾವುಗಳ ಜೊತೆ ಮಲಗುತ್ತೀವಾ.. ಮಹಿಳೆಯರು ಹಾನಿಕಾರಕವಲ್ಲ ಅದಕ್ಕೇ ಅವರ ಜೊತೆ ಮಲಗುತ್ತೇವೆ ಎಂಬುದು ನನ್ನ ಮಾತಿನ ಉದ್ದೇಶವಾಗಿತ್ತು ಎಂದಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಟ್ವಿಟರ್ ಗೆ ಕೈ ಕೊಟ್ಟ ಗಾಯಕ ಸೋನು ನಿಗಂ!