Select Your Language

Notifications

webdunia
webdunia
webdunia
webdunia

ಟ್ವಿಟರ್ ಗೆ ಕೈ ಕೊಟ್ಟ ಗಾಯಕ ಸೋನು ನಿಗಂ!

ಟ್ವಿಟರ್ ಗೆ ಕೈ ಕೊಟ್ಟ ಗಾಯಕ ಸೋನು ನಿಗಂ!
Mumbai , ಬುಧವಾರ, 24 ಮೇ 2017 (12:22 IST)
ಮುಂಬೈ: ಖ್ಯಾತ ಗಾಯಕ ಸೋನು ನಿಗಂ ತಮ್ಮ ಟ್ವಿಟರ್ ಖಾತೆಯನ್ನು ಅಳಿಸಿ ಹಾಕಿದ್ದಾರೆ. ಇತ್ತೀಚೆಗಷ್ಟೇ ಮಸೀದಿಗಳಲ್ಲಿ ಬೆಳಗ್ಗಿನ ಜಾವ ಧ್ವನಿ ವರ್ಧಕ ಇಟ್ಟು ಪ್ರಾರ್ಥನೆ ಮಾಡುವುದರ ಬಗ್ಗೆ ಟ್ವಿಟರ್ ನಲ್ಲಿ ಬರೆದುಕೊಂಡು ವಿವಾದಕ್ಕೀಡಾದ ಬೆನ್ನಲ್ಲೇ ಅವರು ಈ ಕೆಲಸ ಮಾಡಿದ್ದಾರೆ.

 
ಸೋನು ಟ್ವಿಟರ್ ಸಂದೇಶ ವ್ಯಾಪಕ ಚರ್ಚೆಗೆ ಗ್ರಾಸವಾಗಿತ್ತು. ಅಲ್ಲದೆ ಸೋನು ನಿಗಂ ತಲೆ ಬೋಳಿಸಿದವರಿಗೆ 10 ಲಕ್ಷ ಬಹುಮಾನ ನೀಡುವುದಾಗಿ ಮೌಲ್ವಿಯೊಬ್ಬರು ಘೋಷಿಸಿದ್ದರು. ಅದರಂತೆ ಸೋನು ತಲೆ ಬೋಳಿಸಿಕೊಂಡು ಸವಾಲು ಸ್ವೀಕರಿಸಿದ್ದರು.

ಸೋನು ಸುಮಾರು 7 ಲಕ್ಷ ಹಿಂಬಾಲಕರನ್ನು ಹೊಂದಿದ್ದಾರೆ. ಆದರೆ ವಿವಾದಗಳಿಂದ ಬೇಸತ್ತ ಸೋನು ಟ್ವಿಟರ್ ನಲ್ಲೇ ಖಾತೆ ಡಿಲೀಟ್ ಮಾಡುತ್ತಿರುವುದಾಗಿ ಘೋಷಿಸಿದ್ದಾರೆ. ಅಲ್ಲದೆ ಇಂತಹ ಸ್ಥಳದಲ್ಲಿ ನಾನಿರಬಾರದು ಎಂದು ಡಿಲೀಟ್ ಮಾಡುತ್ತಿರುವುದಕ್ಕೆ ಕಾರಣ ವಿವರಿಸಿ ಸರಣಿ ಟ್ವೀಟ್ ಮಾಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ   

Share this Story:

Follow Webdunia kannada

ಮುಂದಿನ ಸುದ್ದಿ

ಸ್ವಲ್ಪದರಲ್ಲೇ ಬಚಾವಾದ ಕಿಚ್ಚ ಸುದೀಪ್