ಚೆನ್ನೈ : ನಟಿ ಸಮಂತಾ ತಮಿಳು ಚಿತ್ರರಂಗದ ಪ್ರಮುಖ ನಟಿಯರಲ್ಲಿ ಒಬ್ಬರು. ಅವರು ಪ್ರಸ್ತುತ ವಿಘ್ನೇಶ್ ಶಿವನ ನಿರ್ದೇಶನದ ಚಿತ್ರದಲ್ಲಿ ನಟಿಸುತ್ತಿದ್ದಾರೆ.
ಅಲ್ಲದೇ ಅವರು ತೆಲುಗಿನಲ್ಲಿ ಪ್ರಸಾರವಾಗುತ್ತಿರುವ ಸ್ಯಾಮ್ ಜಾಮ್ ಎಂಬ ಲೈವ್ ಪ್ರಶ್ನೋತ್ತರ ಕಾರ್ಯಕ್ರವನ್ನು ಆಯೋಜಿಸುತ್ತಿದ್ದಾರೆ. ಈ ನಡುವೆ ನಟಿ ಸಮಂತಾ ನಟಿ ರಕುಲ್ ಪ್ರೀತ್ ಸಿಂಗ್ ಮನೆಗೆ ಈ ಉಡುಗೊರೆಯನ್ನು ಕಳುಹಿಸಿ ವಿವಾದಕ್ಕೆ ಗುರಿಯಾಗಿದ್ದಾರೆ.
ಹೌದು. ನಟಿ ರಕುಲ್ ಪ್ರೀರ್ ಸಿಂಗ್ ಸಮಂತಾ ಅವರ ಸ್ನೇಹಿತೆಯರಲ್ಲಿ ಒಬ್ಬರು. ಹೀಗಾಗಿ ಸಮಂತಾ ಇತ್ತೀಚೆಗೆ ರಕುಲ್ ಪ್ರೀತ ಸಿಂಗ್ ಮನೆಗೆ ವೈನ್ ಬಾಟಲ್ ನೊಂದಿಗೆ ಉಡುಗೊರೆಯನ್ನು ಕಳುಹಿಸಿದ್ದಾರೆ. ಇದಕ್ಕೆ ಸಂಬಂಧಪಟ್ಟ ಫೋಟೊ ಸೋಶಿಯಲ್ ಮೀಡಿಯಾದಲ್ಲಿ ಅಪ್ ಲೋಡ್ ಆಗಿದ್ದು, ಇದು ದೊಡ್ಡ ವಿವಾದಕ್ಕೆ ಕಾರಣವಾಗಿದೆ ಎನ್ನಲಾಗಿದೆ.