ಹೈದರಾಬಾದ್: ನಟಿ ಸಮಂತಾ ಋತು ಪ್ರಭು ಸೋಷಿಯಲ್ ಮೀಡಿಯಾದಲ್ಲಿ ಮಾಜಿ ಪತಿ ನಾಗಚೈತನ್ಯ ಜೊತೆಗಿನ ಎಲ್ಲಾ ಫೋಟೋಗಳನ್ನೂ ಡಿಲೀಟ್ ಮಾಡಿದ್ದಾರೆ.
ನಾಗ-ಸುಮಂತಾ ಜೋಡಿ ಈ ತಿಂಗಳ ಆರಂಭದಲ್ಲಿ ಅಧಿಕೃತವಾಗಿ ತಾವಿಬ್ಬರೂ ವಿಚ್ಛೇದನ ಪಡೆಯುತ್ತಿರುವ ಸುದ್ದಿ ಪ್ರಕಟಿಸಿದ್ದರು. ಇದೀಗ ಸಮಂತಾ ನಾಗ ಜೊತೆಗಿನ ಎಲ್ಲಾ ಫೋಟೋಗಳನ್ನೂ ಡಿಲೀಟ್ ಮಾಡಿ ಹಳೆಯ ನೆನಪನ್ನೂ ಅಳಿಸುವ ಪ್ರಯತ್ನ ಮಾಡಿದ್ದಾರೆ.
ನಾಗಚೈತನ್ಯ, ಅಕ್ಕಿನೇನಿ ನಾಗಾರ್ಜುನ ಸೇರಿದಂತೆ ಕುಟುಂಬದ ಜೊತೆಗಿದ್ದ ಎಲ್ಲಾ ಫೋಟೋಗಳನ್ನೂ ಸಮಂತಾ ಅಳಿಸುವ ಮೂಲಕ ಹಳೆಯ ಜೀವನಕ್ಕೆ ಗುಡ್ ಬೈ ಹೇಳಿದ್ದಾರೆ.