Select Your Language

Notifications

webdunia
webdunia
webdunia
webdunia

ಜೀವ ಬೆದರಿಕೆ ನಡುವೆಯೂ ಸಿನಿಮಾ ಶೂಟಿಂಗ್‌ನಲ್ಲಿ ಪಾಲ್ಗೊಂಡ ಸಲ್ಮಾನ್ ಖಾನ್

Actor Salman Khan, Movie Shooting, Life Threat For Salman Khan

Sampriya

ಮಹಾರಾಷ್ಟ್ರ , ಗುರುವಾರ, 17 ಅಕ್ಟೋಬರ್ 2024 (19:19 IST)
ಮಹಾರಾಷ್ಟ್ರ: ಅಕ್ಟೋಬರ್ 12ರಂದು ರಾಜಕಾರಣಿ ಬಾಬಾ ಸಿದ್ದಿಕ್ ಅವರ ಹತ್ಯೆಯ ನಂತರ ನಟ  ಸಲ್ಮಾನ್ ಖಾನ್ ಅವರಿಗೂ ಭದ್ರತೆಯನ್ನು ಹೆಚ್ಚಿಸಲಾಗಿದೆ.

ಪ್ರಮುಖ ಮಾಧ್ಯಮ ಪೋರ್ಟಲ್‌ನ ಇತ್ತೀಚಿನ ವರದಿಗಳ ಪ್ರಕಾರ, ಖಾನ್ ಅವರು ಇದೀಗ ತಮ್ಮ ಮುಂಬರುವ ಸಿನಿಮಾದ ಶೂಟಿಂಗ್‌ನಲ್ಲಿ ತೊಡಗಿಕೊಂಡಿದ್ದಾರೆಂಬ ಸುದ್ದಿ ಹರಿದಾಡುತ್ತಿದೆ.

ಬಿಗಿ ಭದ್ರತೆಯೊಂದಿಗೆ ಸಲ್ಮಾನ್ ಖಾನ್ ಶೂಟಿಂಗ್‌ನಲ್ಲಿ ಭಾಗವಹಿಸಿದ್ದಾರೆ ಎಂದು ತಿಳಿದುಬಂದಿದೆ. ಈ ಹಿಂದೆ, ಬಾಬಾ ಸಿದ್ದಿಕ್‌ನ ಸಾವಿನ ಮಧ್ಯೆ, ದರೋಡೆಕೋರ ಲಾರೆನ್ಸ್ ಬಿಷ್ಣೋಯ್‌ನಿಂದ ಹೆಚ್ಚುತ್ತಿರುವ ಬೆದರಿಕೆಯಿಂದಾಗಿ ಖಾನ್‌ನ ಭದ್ರತೆಯನ್ನು ವೈ-ಪ್ಲಸ್‌ಗೆ ಹೆಚ್ಚಿಸಲಾಗಿದೆ ಎಂದು ಹೇಳಲಾಗಿತ್ತು.

ಸಲ್ಮಾನ್ ಖಾನ್ ಅವರು ತಮ್ಮ ಸಿನಿಮಾ ಶೂಟಿಂಗ್‌ ಅನ್ನು ಮುಂದೂಡಿದ್ದರು ಎಂದು ಸುದ್ದಿ ಹರಿದಾಡಿತ್ತು. ಆದರೆ ಅದೆಲ್ಲಾ ಸುಳ್ಳು ಎಂದು ಅವರ ಮ್ಯಾನೇಜರ್ ತಿಳಿಸಿದ್ದಾರೆ. ಇತ್ತೀಚಿನ ವರದಿಗಳ ಪ್ರಕಾರ ನಟರ ಭದ್ರತೆಯನ್ನು ಸಹ ಸೆಟ್‌ಗಳಲ್ಲಿ ಹೆಚ್ಚಿಸಲಾಗಿದೆ.


Share this Story:

Follow Webdunia kannada

ಮುಂದಿನ ಸುದ್ದಿ

ಕೊನೆಗೂ ನಟಿ ಕಂಗನಾ ಅಭಿನಯದ ಎಮರ್ಜೆನ್ಸಿ ಸಿನಿಮಾಗೆ ಬಿಗ್‌ ರಿಲೀಫ್