Select Your Language

Notifications

webdunia
webdunia
webdunia
webdunia

ತನ್ನ ಮೇಲಿನ ಗಂಭೀರ ಆರೋಪಕ್ಕೆ ವೇದಿಕೆಯಲ್ಲಿ ಕೌಂಟರ್ ಕೊಟ್ಟ ಸಲ್ಮಾನ್‌ ಖಾನ್

ನಟ ಸಲ್ಮಾನ್ ಖಾನ್

Sampriya

ಬೆಂಗಳೂರು , ಸೋಮವಾರ, 8 ಸೆಪ್ಟಂಬರ್ 2025 (17:13 IST)
Photo Credit X
ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಅವರು ಯಾವಾಗಲೂ ಒಳ್ಳೆಯ ಮತ್ತು ಕೆಟ್ಟ ಕಾರಣಗಳಿಂದ ಸುದ್ದಿಯಲ್ಲೇ ಇರುತ್ತಾರೆ.  

ಬಾಲಿವುಡ್​​ನಲ್ಲಿ ಅವರು ಸ್ಟಾರ್ ಆಗಿ ಮಿಂಚಿರುವ ಸಲ್ಮಾನ್ ಬಿಗ್‌ಬಾಸ್ ಮೂಲಕವೂ ಅಭಿನಯಿಸುತ್ತಾ ರಂಜಿಸುತ್ತಿದ್ದಾರೆ. 

ನಟನಾಗಿ ಮಾತ್ರವಲ್ಲದೇ ನಿರ್ಮಾಪಕನಾಗಿಯೂ ಸಲ್ಮಾನ್ ಖಾನ್ ಬ್ಯುಸಿ ಆಗಿದ್ದಾರೆ. ಅನೇಕರಿಗೆ ಅವರು ಅವಕಾಶ ನೀಡಿದ್ದಾರೆ. ಆದರೆ ಇನ್ನೊಂದು ಆರೋಪ ಇದೆ. ಕೆಲವರ ಜೀವನವನ್ನು ಸಲ್ಮಾನ್ ಖಾನ್ ಹಾಳು ಮಾಡಿದ್ದಾರೆ ಎಂದು ಆರೋಪಿಸಲಾಗುತ್ತದೆ. ಆ ಬಗ್ಗೆ ‘ಬಿಗ್ ಬಾಸ್ 19’ ವೇದಿಕೆಯಲ್ಲೇ ಉತ್ತರ ನೀಡಿದ್ದಾರೆ. 

ವೀಕೆಂಡ್ ಸಂಚಿಕೆಯಲ್ಲಿ ಮಾಜಿ ಸ್ಪರ್ಧಿ ಶೆಹನಾಜ್ ಗಿಲ್ ಅವರು ವೇದಿಕೆಗೆ ಬಂದು, ಅವರು ಸಲ್ಮಾನ್ ಖಾನ್ ಮಾತನಾಡುತ್ತಿರುವಾಗ ಈ ವಿಚಾರ ಪ್ರಸ್ತಾಪಗೊಂಡಿದೆ. ಈ ವೇಳೆ ಶೆಹನಾಜ್ ಅವರು ‘ನೀವು ಎಷ್ಟೋ ಜನರ ಜೀವನ ರೂಪಿಸಿದ್ದೀರಿ’ ಎಂದರು.

ನಾನು ಯಾವಾಗ ಜನರ ಜೀವನ ರೂಪಿಸಿದ್ದೇನೆ? ಜೀವನ ರೂಪಿಸುವವನು ದೇವರು. ನಾನು ಜೀವನ ಹಾಳು ಮಾಡಿದ್ದೇನೆ ಎಂದು ಕೂಡ ಕೆಲವರು ಆರೋಪ ಹೊರಿಸಿದ್ದಾರೆ. ಪ್ರಮಾಣಿಕವಾಗಿ ಹೇಳಬೇಕು ಎಂದರೆ ಅದೆಲ್ಲ ನನ್ನ ಕೈಯಲ್ಲಿ ಇಲ್ಲ. ಹಾಗೇನಾದರೂ ಮಾಡುವುದಿದ್ದರೆ ನನ್ನ ಜೀವನವನ್ನೇ ಹಾಳು ಮಾಡಿಕೊಳ್ಳುತ್ತೇನೆ. ಮತ್ತೆ ಸರಿಪಡಿಸಿಕೊಳ್ಳಲು ಪ್ರಯತ್ನಿಸುವೆ ಎಂದರು.

ಸಲ್ಮಾನ್ ಖಾನ್ ಮೇಲೆ ಬಾಲಿವುಡ್ ನಿರ್ದೇಶಕ ಅಭಿನವ್ ಕಶ್ಯಪ್ ಅಬರಿ ಸಲ್ಮಾನ್ ಖಾನ್ ಅವರಿಂದಾಗಿ ನನ್ನ ವೃತ್ತಿಜೀವನ ಹಾಳಾಯಿತು ಎಂದು ಹೇಳಿದ್ದರು. ಅದಲ್ಲದೆ ನಟ ವಿವೇಕ  ಒಬೆರಾಯ್ ಅವರ ಮೇಲೂ ಸಲ್ಮಾನ್ ಖಾನ್ ಹಗೆತನ ಸಾಧಿಸಿ ವೃತ್ತಿಜೀವನಕ್ಕೆ ತೊಂದರೆ ನೀಡಿದ್ದರು ಎಂಬ ಸುದ್ದಿಯಿದೆ. 

ಅದಲ್ಲದೆ ಗಾಯಕ ಅರಿಜಿತ್ ಸಿಂಗ್, ಸೋಮಿ ಅಲಿ, ಬಿಗ್ ಬಾಸ್ ಮಾಜಿ ಸ್ಪರ್ಧಿ ಆಕಾಶದೀಪ್ ಸೇಗಲ್ ಮುಂತಾದವರು ಕೂಡ ಸಲ್ಮಾನ್ ಖಾನ್ ಮೇಲೆ ಇದೇ ರೀತಿಯ ಆರೋಪ ಮಾಡಿದ್ದರು. ಈಗ ಬಿಗ್ ಬಾಸ್ ವೇದಿಕೆಯಲ್ಲಿ ಅವುಗಳಿಗೆಲ್ಲ ಪರೋಕ್ಷವಾಗಿ ಸಲ್ಮಾನ್ ಖಾನ್ ಪ್ರತಿಕ್ರಿಯೆ ನೀಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ದೃಷ್ಟಿಬೊಟ್ಟು ಧಾರವಾಹಿ ಕೊನೆ: ವಿಜಯ್ ಸೂರ್ಯ ಬಗ್ಗೆ ಕೇಳಿಬರುತ್ತಿದೆ ಹೊಸ ಸುದ್ದಿ