Webdunia - Bharat's app for daily news and videos

Install App

ಸಾಯಿ ಪಲ್ಲವಿಯ ಈ ನಿರ್ಧಾರಕ್ಕೆ ಆಶ್ಚರ್ಯ ಚಕಿತರಾದ ಅಭಿಮಾನಿಗಳು

Webdunia
ಶುಕ್ರವಾರ, 23 ಅಕ್ಟೋಬರ್ 2020 (13:43 IST)
ಹೈದರಾಬಾದ್ :  ಥಿಯಾ ಚಿತ್ರದ ಮೂಲಕ ಸಿನಿಮಾರಂಗಕ್ಕೆ ಪಾದಾರ್ಪಣೆ ಮಾಡಿದ ನಟಿ ಸಾಯಿ ಪಲ್ಲವಿ ಪ್ರೇಮ ಚಿತ್ರದ ಮೂಲಕ ಯುವಕರ ಕನಸಿನ ನಾಯಕಿಯಾಗಿದ್ದಾರೆ. ಬಳಿಕ ಅವರು ಹಲವು ಚಿತ್ರಗಳಲ್ಲಿ ನಟಿಸಿ ಅಭಿಮಾನಿಗಳ ಮನಗೆದ್ದಿದ್ದಾರೆ. ಅಂತಹ ನಟಿ ಇದೀಗ ಈ ಚಿತ್ರದಲ್ಲಿ ನಟಿಸುತ್ತಿರುವ ಪಾತ್ರದ ಬಗ್ಗೆ ಅಭಿಮಾನಿಗಳಲ್ಲಿ ಗೊಂದಲ ಉಂಟಾಗಿದೆ.

ನಟಿ ಸಾಯಿ ಪಲ್ಲವಿ  ‘ಲವ್ ಸ್ಟೋರಿ’ ಮತ್ತು ‘ವಿರಾಟ ಪರ್ವಂ’ ಎರಡು ಚಿತ್ರಗಳಲ್ಲಿ ನಟಿಸುತ್ತಿದ್ದಾರೆ. ಆದರೆ ಈ ನಡುವೆ ಇದೀಗ ನಟಿ ಸಾಯಿ ಪಲ್ಲವಿ ಸ್ಟಾರ್ ನಟನ ಚಿತ್ರದಲ್ಲಿ ತಂಗಿಯ ಪಾತ್ರ ಮಾಡಲು ಮುಂದಾಗಿದ್ದಾರೆ ಎಂಬುದಾಗಿ ತಿಳಿದುಬಂದಿದೆ.

ಹೌದು. ನಟಿ ಸಾಯಿ ಪಲ್ಲವಿ  ಅವರು ತಮಿಳು ‘ವೇದಲಂ’ ಚಿತ್ರದ ತೆಲುಗು ರಿಮೇಕ್ ನಲ್ಲಿ ಚಿರಂಜೀವಿ ಅವರ ತಂಗಿ ಪಾತ್ರದಲ್ಲಿ ನಟಿಸಲಿದ್ದಾರಂತೆ. ಅಂದರೆ ತಮಿಳಿನಲ್ಲಿ ಲಕ್ಷ್ಮೀ ಮೆನನ್ ನಿರ್ವಹಿಸಿದ ಪಾತ್ರವನ್ನು ತೆಲುಗಿನಲ್ಲಿ ಸಾಯಿ ಪಲ್ಲವಿ ಮಾಡಲು ಮುಂದಾಗಿದ್ದಾರೆ ಎನ್ನಲಾಗಿದೆ. ನಟಿಯ ಈ ನಿರ್ಧಾರ ಅಭಿಮಾನಿಗಳಲ್ಲಿ ಆಶ್ಚರ್ಯವನ್ನುಂಟು ಮಾಡಿದ್ದು, ಇವರು ಬೇಡಿಕೆ ಕಳೆದುಕೊಂಡರೆ ಎಂಬ ಅನುಮಾನ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.

ಸಂಬಂಧಿಸಿದ ಸುದ್ದಿ

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

ಮುಂದಿನ ಸುದ್ದಿ
Show comments