Publish Date: Sat, 12 Aug 2023 (08:10 IST)
Updated Date: Sat, 12 Aug 2023 (08:13 IST)
ಚೆನ್ನೈ: ಸೌತ್ ಸುಂದರಿ ಸಾಯಿ ಪಲ್ಲವಿ ಇತ್ತೀಚೆಗೆ ಹೊಸ ಸಿನಿಮಾಗಳನ್ನು ಒಪ್ಪಿಕೊಳ್ಳದೇ ಇರುವುದು ಅವರ ಅಭಿಮಾನಿಗಳಲ್ಲಿ ಅನೇಕ ಪ್ರಶ್ನೆ ಮೂಡಿಸಿದೆ.
ಗಾರ್ಗಿ ಸಿನಿಮಾ ರಿಲೀಸ್ ಆಗಿ ಒಂದು ವರ್ಷ ಕಳೆದರೂ ಸಾಯಿ ಪಲ್ಲವಿ ಕಡೆಯಿಂದ ಹೊಸ ಸಿನಿಮಾ ಸುದ್ದಿ ಬಂದಿಲ್ಲ. ಇತ್ತೀಚೆಗೆ ಅಮರನಾಥ ಯಾತ್ರೆ ಕೈಗೊಂಡು ಸುದ್ದಿಯಾಗಿದ್ದು ಬಿಟ್ಟರೆ ಸಿನಿಮಾಗಳಿಂದ ದೂರವೇ ಇದ್ದಾರೆ.
ಗಾರ್ಗಿ ಹಾಗೂ ಇದಕ್ಕೆ ಮೊದಲು ಅಭಿನಯಿಸಿದ್ದ ವಿರಾಟ ಪರ್ವಂ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಹೆಚ್ಚು ಗಳಿಕೆ ಮಾಡಲಿಲ್ಲ. ಇದಾದ ಬಳಿಕ ಕಾಶ್ಮೀರ್ ಫೈಲ್ಸ್ ಸಿನಿಮಾ ಬಗ್ಗೆ ಸಾಯಿ ಪಲ್ಲವಿ ನೀಡಿದ್ದ ವಿವಾದಾತ್ಮಕ ಹೇಳಿಕೆ ಬಲಪಂಥೀಯರ ಕಣ್ಣು ಕೆಂಪಗಾಗಿಸಿತ್ತು. ಬಳಿಕ ನಾಗಚೈತನ್ಯ-ಸಮಂತಾ ನಡುವಿನ ವಿಚ್ಛೇದನಕ್ಕೂ ಅವರನ್ನೇ ಕಾರಣ ಮಾಡಲಾಯಿತು. ಇದೆಲ್ಲಾ ವಿವಾದಗಳ ಬಳಿಕ ಅವರು ಸಿನಿಮಾಗಳಿಂದ ದೂರವೇ ಉಳಿದಿದ್ದಾರೆ. ಹೀಗಾಗಿ ಸಿನಿಮಾ ಬಿಟ್ಟು ಕುಟುಂಬ ಜೀವನದ ಬಗ್ಗೆ ಹೆಚ್ಚು ಗಮನ ಕೇಂದ್ರೀಕರಿಸಿದ್ದಾರೆ ಎನ್ನಲಾಗಿದೆ.