Webdunia - Bharat's app for daily news and videos

Install App

ವಿವಾದಕ್ಕೆ ಕ್ಷಮೆ ಯಾಚಿಸಿದ ನಟಿ ಸಾಯಿ ಪಲ್ಲವಿ

Webdunia
ಭಾನುವಾರ, 19 ಜೂನ್ 2022 (08:00 IST)
ಹೈದರಾಬಾದ್: ಕಾಶ್ಮೀರಿ ಪಂಡಿತರ ಹತ್ಯೆ ಮತ್ತು ಗೋ ಸಾಗಣಿಕೆ ಹೆಸರಲ್ಲಿ ನಡೆದ ಹತ್ಯೆ ಎರಡೂ ಒಂದೇ ಎಂದು ಹೇಳಿಕೆ ನೀಡಿ ವಿವಾದಕ್ಕೆ ಸಿಲುಕಿದ್ದ ನಟಿ ಸಾಯಿ ಪಲ್ಲವಿ ಈಗ ತಮ್ಮ ಹೇಳಿಕೆಗೆ ಕ್ಷಮೆ ಯಾಚಿಸಿದ್ದಾರೆ.

ಸಾಯಿ ಪಲ್ಲವಿ ಹೇಳಿಕೆ ವಿರುದ್ಧ ಹೈದರಾಬಾದ್ ನಲ್ಲಿ ದೂರು ಕೂಡಾ ದಾಖಲಾಗಿತ್ತು. ವಿವಾದದ ಬಳಿಕ ಸೋಷಿಯಲ್ ಮೀಡಿಯಾದಲ್ಲಿ ಸಾಯಿ ಪಲ್ಲವಿ ವಿಡಿಯೋ ಮೂಲಕ ಕ್ಷಮೆ ಯಾಚಿಸಿದ್ದಾರೆ.

ಯಾವುದೇ ಧರ್ಮವನ್ನು ನೋಯಿಸುವ ಉದ್ದೇಶ ನನ್ನದಾಗಿರಲಿಲ್ಲ. ನನ್ನ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ. ಧರ್ಮದ ಹೆಸರಿನಲ್ಲಿ ನೋವು ಮಾಡುವುದು ತಪ್ಪು ಎಂಬರ್ಥದಲ್ಲಿ ಆ ಹೇಳಿಕೆ ನೀಡಿದ್ದೆ. ಒಬ್ಬ ವೈದ್ಯಕೀಯ ಪದವೀಧರೆಯಾಗಿ ನಾನು ಎಲ್ಲಕ್ಕಿಂತ ಮನುಷ್ಯ ಜೀವ, ಜೀವನ ದೊಡ್ಡದು ಎಂದು ನಂಬಿದ್ದೇನೆ. ಹಾಗಿದ್ದರೂ ನನ್ನ ಹೇಳಿಕೆಯಿಂದ ಯಾರಿಗಾದರೂ ನೋವಾದಲ್ಲಿ ಕ್ಷಮೆ ಯಾಚಿಸುತ್ತೇನೆ’ ಎಂದಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

Renukaswamy Case: ಎರಡನೇ ಭಾರೀ ಜೈಲು ಸೇರಿದ ದರ್ಶನ್‌

ಏನೂ ಆಗಲ್ಲ ಬಾಸ್, ನಿಮ್ಮೊಂದಿಗೆ ನಾವಿದ್ದೇವೆ: ಡಿಬಾಸ್ ಗೆ ಫ್ಯಾನ್ಸ್ ಫುಲ್ ಸಪೋರ್ಟ್

ಫೇವರೇಟ್‌ ಕಲರ್‌ನ ಬಟ್ಟೆ, ಲಿಪ್‌ಸ್ಟಿಕ್‌, ಕ್ಲಿಪ್‌ ಹಾಕಿ ಗ್ಲಾಮರ್‌ ಲುಕ್‌ನಲ್ಲೇ ಹೊರಟ ಪವಿತ್ರಾ

ಜೀಪ್ ನಲ್ಲೂ ಬರಲಿಲ್ಲ, ಪತ್ನಿ ಬಳಿಯೂ ಬರಲಿಲ್ಲ, ದರ್ಶನ್ ಪ್ಲ್ಯಾನ್ ಏನು

ಜೈಲು ಸೇರುತ್ತಿದ್ದರೂ ಒಂಚೂರು ಬದಲಾಗದ ಪವಿತ್ರಾ ಗೌಡ ವರಸೆ, ಸುಬ್ಬಿ ಗರಂ ಆಗಿದ್ಯಾಕೆ

ಮುಂದಿನ ಸುದ್ದಿ
Show comments