ವಿನಯ್ ರಾಜ್ ಕುಮಾರ್ ಅಭಿನಯದ ರನ್ ಆಂಟನಿ ಸಿನಿಮಾ ಮುಂದಿನ ತಿಂಗಳು ಒಂದರಂದು ರಿಲೀಸ್ ಆಗುತ್ತೆ ಅಂತಾ ಅಭಿಮಾನಿಗಳಲ್ಲಾ ಫುಲ್ ಖುಷಿಯಾಗಿದ್ದರು. ಸಿನಿಮಾ ತಂಡ ಕೂಡ ಅದಕ್ಕಾಗಿ ಸಾಕಷ್ಟು ಸಿದ್ಧತೆಗಳನ್ನು ಮಾಡಿಕೊಂಡಿತ್ತು. ಆದ್ರೀಗ ಜುಲೈ 1 ರಂದು ಸಿನಿಮಾ ರಿಲೀಸ್ ಆಗೋದು ಡೌಟ್ ಅಂತಾ ಹೇಳಲಾಗುತ್ತಿದೆ.
ಇನ್ನು ಏಕಾಏಕಿ ಸಿನಿಮಾ ರಿಲೀಸ್ ಆಗ್ತಿರೋದು ಮುಂದಕ್ಕೆ ಹೋಗ್ತಿರೋದಕ್ಕೆ ಕಾರಣ ಅದೇ ದಿನ ಜೂಮ್ ಸಿನಿಮಾ ರಿಲೀಸ್ ಆಗ್ತಿರೋದು. ಎರಡು ಸಿನಿಮಾಗಳು ಒಂದೇ ದಿನ ರಿಲೀಸ್ ಆದ್ರೆ ಚೆನ್ನಾಗಿರಲ್ಲ ಅಂತಾ 'ರನ್ ಆಂಟನಿ' ಸಿನಿಮಾ ತಂಡ ತಮ್ಮ ಸಿನಿಮಾದ ರಿಲೀಸ್ ಡೇಟ್ ನ್ನು ಮುಂದಕ್ಕೆ ಹಾಕಿದೆಯಂತೆ.ಇನ್ನು ಸಿನಿಮಾ ರಿಲೀಸ್ ಮುಂದಕ್ಕೆ ಹೋಗೋದಕ್ಕೆ ಇನ್ನೂ ಒಂದು ಕಾರಣ ಕೂಡ ಇದೆ. ಚಿತ್ರ ಇನ್ನೂ ಸೆನ್ಸಾರ್ ಆಗಿಲ್ವಂತೆ. ಮುಂದಿನ ಒಂದು ವಾರದಲ್ಲಿ ಹರಿಬರಿಯಾಗಿ ಸೆನ್ಸರ್ ಮಾಡಿಸಿ, ಆ ನಂತರ ಚಿತ್ರಮಂದಿರಗಳನ್ನು ತರಾತುರಿಯಲ್ಲಿ ಹಿಡಿಯುವ ಬದಲು, ಮೊದಲು ಸೆನ್ಸಾರ್ ಮಾಡಿಸಿ, ನಂತರ ಆರಾಮಾವಾಗಿ ರಿಲೀಸ್ ಮಾಡೋ ಪ್ಲಾನ್ ನಲ್ಲಿದ್ದಾರಂತೆ.
ಅಂದ್ಹಾಗೆ ಜುಲೈ 15ರಂದು ರಜನಿಕಾಂತ್ ಅಭಿನಯದ 'ಕಬಾಲಿ' ಚಿತ್ರವು ಬಿಡುಗಡೆಯಾಗುತ್ತಿದೆ. ಆದ್ದರಿಂದ ರಾಘವೇಂದ್ರ
ರಾಜ್‌ಕುಮಾರ್ ಅವರು ಕಬಾಲಿ ರಿಲೀಸ್ ಆದ ಬಳಿಕ ತನ್ನ ಮಗನ ಸಿನಿಮಾವನ್ನು ರಿಲೀಸ್ ಮಾಡೋದಕ್ಕೆ ಪ್ಲಾನ್ ಮಾಡಿದ್ದಾರಂತೆ. ಅದೇ ಪ್ರಕಾರ ನಡೆದ್ರೆ ರನ್ ಆ್ಯಂಟನಿಯನ್ನು ನೋಡೋದಕ್ಕೆ ಇನ್ನೂ ಎರಡು ವಾರ ಕಾಯಲೇ ಬೇಕು.
ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ
ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.