Select Your Language

Notifications

webdunia
webdunia
webdunia
webdunia

ಸ್ಯಾಂಡಲ್ ವುಡ್ ನಲ್ಲಿ ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ ಆಟೋ ಚಾಲಕರು

ಸ್ಯಾಂಡಲ್ ವುಡ್ #ಸಿನಿಮಾ #ಆಟೋ ಚಾಲಕರು# ನಿರ್ಮಾಣ# ಅರು ಗೌಡ #ಹೀರೋ
, ಶನಿವಾರ, 25 ಜೂನ್ 2016 (09:54 IST)
ರಿಯಲ್ ಎಸ್ಟೇಟ್ ಉದ್ಯಮಿಗಳು, ಉದ್ಯಮಿಗಳು, ಟೆಕ್ಕಿಗಳು ಹೀಗೆ ಅನೇಕರು ಸಿನಿಮಾ ನಿರ್ಮಾಣ ಮಾಡೋದು ಹೊಸದೇನಲ್ಲ. ಆದ್ರೆ ಇದೀಗ ಸ್ಯಾಂಡಲ್ ವುಡ್ ನಲ್ಲಿ 400 ಜನ ತಂಡವೊಂದು ಸೇರಿ ಸಿನಿಮಾ ಮಾಡೋದಕ್ಕೆ ಹೊರಟಿದೆ.ಅಂದ್ಹಾಗೆ ಅವರ್ಯಾರು ದೊಡ್ಡ ಉದ್ಯಮಿಗಳಲ್ಲ. ಕೋಟಿಗಟ್ಟಲೇ ದುಡ್ಡು ಕೂಡಿಟ್ಟವರಲ್ಲ. ಇವರೆಲ್ಲಾ ಸಾಮಾನ್ಯ ಆಟೋ ಚಾಲಕರು.

 
ಹೌದು... ಸ್ಯಾಂಡಲ್‌ವುಡ್ ನಲ್ಲಿ ಇದೀಗ ಹೊಸಬರ ಕಾಲ, ಹೊಸಬರ ಸಿನಿಮಾಗಳಿಗೆ ಭರ್ಜರಿ ರೆಸ್ಪಾನ್ಸ್ ಸಿಗುತ್ತಿದೆ. ಅಲ್ಲದೇ ಸ್ಯಾಂಡಲ್ ವುಡ್ ನಲ್ಲಿ ಹೊಸ ಹೊಸ ನಿರ್ಮಾಪಕರು , ನಿರ್ದೇಶಕರು ಹುಟ್ಟಿಕೊಳ್ಳುತ್ತಲೇ ಇದ್ದಾರೆ. ಇದೀಗ ಅಂತಹದ್ದೇ ನಿರ್ಮಾಪಕರ ತಂಡವೊಂದು ಹುಟ್ಟಿಕೊಂಡಿದೆ.ಅವರೆಲ್ಲಾ ಆಟೋ ಡ್ರೈವರುಗಳು. ಹೌದು... 400 ಆಟೋಡ್ರೈವರ್ ಗಳು ಇದೀಗ ಗಾಂಧೀನಗರದಲ್ಲಿ ತಮ್ಮ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ.ಎಲ್ಲರೂ ಸೇರಿ ಸಿನಿಮಾ ಮಾಡೋದಕ್ಕೆ ಮುಂದಾಗಿದ್ದಾರೆ.ಪ್ರತಿಯೊಬ್ಬರು ಕೂಡ ಸಿನಿಮಾಗಾಗಿ ಒಂದು ಸಾವಿರ ರೂಪಾಯಿಯಿಂದ 2 ಲಕ್ಷದವೆರೆಗೆ ಸಾಮರ್ಥ್ಯಕ್ಕೆ ತಕ್ಕಂತೆ ಹಣ ಹೂಡಿದ್ದಾರಂತೆ.
 
ಇನ್ನು ಈ ಸಿನಿಮಾದ ನಿರ್ಮಾಣದ ಜವಾಬ್ದಾರಿಯನ್ನು ಆಟೋ ನಾಗರಾಜ್ ಅವರು. ವೃತ್ತಿಯಲ್ಲಿ ಆಟೋ ಡ್ರೈವರ್ ಆಗಿರುವ ಈಗಾಗಲೇ ಸಿನಿಮಾ ರಂಗದಲ್ಲೂ ಗುರುತಿಸಿಕೊಂಡಿದ್ದಾರೆ. ಹಾಗಾಗಿ ಅವರೇ ಸ್ನೇಹಿತರೇ ಆದ ಆಟೋ ಡ್ರೈವರ್ ಗಳು ಅವರೊಂದಿಗೆ ಕೈ ಜೋಡಿಸುತ್ತಿದ್ದಾರೆ. ಇನ್ನು ಸಿನಿಮಾದಲ್ಲಿ ಈಗಾಗಲೇ ಮುದ್ದು ಮನಸೇ ಸಿನಿಮಾದ ಮೂಲಕ ನಾಯಕನಾಗಿರುವ ಅರು ಗೌಡ ಅವರು ನಾಯಕನಾಗಿ ಕಾಣಿಸಿಕೊಳ್ಳುತ್ತಿದ್ದಾರಂತೆ. ಎ.ಆರ್ ಶಾನ್ ಅವರು ಸಿನಿಮಾವನ್ನು ನಿರ್ದೇಶನ ಮಾಡುತ್ತಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಅಂಬರೀಶ್ ಪರ ಬ್ಯಾಟ್ ಬೀಸಿದ ನಟ ಹುಚ್ಚ ವೆಂಕಟ್