Webdunia - Bharat's app for daily news and videos

Install App

ಕಾಂತಾರ ಚಾಪ್ಟರ್‌ 1ರಲ್ಲಿ ರಿಷಭ್‌ ಶೆಟ್ಟಿಗೆ ಜೋಡಿಯಾಗಿ ರುಕ್ಮಿಣಿ: ಅಕ್ಟೋಬರ್‌ 2ರಂದು ಸಿನಿಮಾ ತೆರೆಗೆ

Sampriya
ಶುಕ್ರವಾರ, 8 ಆಗಸ್ಟ್ 2025 (11:51 IST)
Photo Credit X
ಬೆಂಗಳೂರು: ರಿಷಭ್‌ ಶೆಟ್ಟಿ ನಟಿಸಿ ನಿರ್ದೇಶಿಸಿರುವ ಕಾಂತಾರ ಚಾಪ್ಟರ್‌ 1 ಅಕ್ಟೋಬರ್‌ 2ರಂದು ಬಿಡುಗಡೆಯಾಗಲಿದೆ. ಈ ಮಧ್ಯೆ ಚಿತ್ರತಂಡವು ಚಿತ್ರದ ಕನಕವತಿ ಪಾತ್ರವನ್ನು ಪರಿಚಯಿಸಿದೆ. 

ಕನಕವತಿ ಪಾತ್ರಕ್ಕೆ ನಟಿ ರುಕ್ಮಿಣಿ ವಸಂತ್ ಜೀವ ತುಂಬಿದ್ದಾರೆ. ರಿಷಭ್‌ ಶೆಟ್ಟಿ ಅವರಿಗೆ ಜೋಡಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ವರಮಹಾಲಕ್ಷ್ಮಿ ಹಬ್ಬದ ದಿನವಾದ ಇಂದು ಚಿತ್ರತಂಡವು ಅವರ ಮೊದಲ ನೋಟವನ್ನು ಅನಾವರಣಗೊಳಿಸಿದೆ.  ಈ ಬಗ್ಗೆ ಹೊಂಬಾಳೆ ಫಿಲ್ಮ್ಸ್‌ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್‌ ಹಂಚಿಕೊಂಡಿದೆ.  

ಚಿತ್ರವು ಕನ್ನಡ, ಹಿಂದಿ, ತೆಲುಗು, ಮಲಯಾಳ, ತಮಿಳು, ಬೆಂಗಾಲಿ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಅಕ್ಟೋಬರ್ 2ರಂದು ತೆರೆ ಕಾಣಲಿದೆ. 3000ಕ್ಕೂ ಹೆಚ್ಚು ಜೂನಿಯರ್‌ ಕಲಾವಿದರು ಈ ಸಿನಿಮಾದ ಶೂಟಿಂಗ್‌ನಲ್ಲಿ ಭಾಗವಹಿಸಿದ್ದರು. 

ಕದಂಬರ ಆಳ್ವಿಕೆಯ ಕಾಲದಲ್ಲಿ ಹುಟ್ಟಿದ ದಂತಕಥೆಯ ಕಥಾಹಂದರ ಹೊಂದಿರುವ ಈ ಸಿನಿಮಾಗಾಗಿ ಉಡುಪಿ ಜಿಲ್ಲೆಯ ಕುಂದಾಪುರದ ಒಂದು ಹೊಸ ಲೋಕವನ್ನೇ ರಿಷಬ್‌ ಸೃಷ್ಟಿಸಿದ್ದಾರೆ. 

ಛಾಯಾಚಿತ್ರಗ್ರಾಹಕ ಅರವಿಂದ್‌ ಕಶ್ಯಪ್‌, ಸಂಗೀತ ನಿರ್ದೇಶಕ ಬಿ. ಅಜನೀಶ್ ಲೋಕನಾಥ್, ಪ್ರೊಡಕ್ಷನ್ ಡಿಸೈನರ್ ವಿನೇಶ್ ಬಂಗ್ಲನ್ ಇಡೀ ಸಿನಿಮಾಗೆ ಅದ್ಭುತ ದೃಶ್ಯ ಮತ್ತು ಭಾವನಾತ್ಮಕ ಸ್ಪರ್ಶ ನೀಡಿದ್ದಾರೆ.<>

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಮಡೆನೂರು ಮನು ವಿರುದ್ಧದ ರೇಪ್‌ ಕೇಸ್‌ನಲ್ಲಿ ನಡೆ ಬದಲಾಯಿಸಿದ ಸಂತ್ರಸ್ತ ನಟಿ

ಧರ್ಮಸ್ಥಳ ಪ್ರಕರಣ: ಯೂಟ್ಯೂಬರ್ ಮೇಲಿನ ದಾಳಿಗೆ ನಟ ಪ್ರಕಾಶ್ ರಾಜ್‌ ಖಂಡನೆ, ವಿಡಿಯೋ

ಸು ಫ್ರಮ್ ಸೋ ಸಿನಿಮಾ ಕೊನೆಗೂ ಮಾಡಿತು ಆ ದಾಖಲೆ

ಸುಪ್ರೀಂ ಆದೇಶದ ಆತಂಕದ ಬೆನ್ನಲ್ಲೇ ನಾಡದೇವಿಯ ಮೊರೆ ಹೋದ ದರ್ಶನ್‌ ತೂಗುದೀಪ್‌

ನಾನು ಒಬ್ಬಂಟಿ ಪೋಷಕಿ, ನನಗೆ ಮಗಳಿದ್ದಾಳೆ: ಜಾಮೀನು ರದ್ದು ಮಾಡಬೇಡಿ ಎಂದ ಪವಿತ್ರಾ

ಮುಂದಿನ ಸುದ್ದಿ
Show comments