ಬೆಂಗಳೂರು: ಕ್ಯಾನ್ಸರ್‌ನಿಂದ ಬಳಲುತ್ತಿದ್ದ ನಟ, ಕೆಜಿಎಫ್ ಸಿನಿಮಾದ ಚಾಚಾ ಎಂದೇ ಖ್ಯಾತಿ ಪಡೆದ ಹರೀಶ್ ರಾಯ್ ಂತಿಮ ದರ್ಶನವನ್ನು ನಟ ರಾಕಿಂಗ್ ಸ್ಟಾರ್ ಯಶ್ ಪಡೆದರು.
ತಮ್ಮ ಟಾಕ್ಸಿಕ್ ಚಿತ್ರದ ಕೆಲಸದಲ್ಲಿ ಬ್ಯುಸಿ ಮಧ್ಯೆಯೂ ಹರೀಶ್ ರಾಯ್ ಅಂತಿಮ ದರ್ಶನ ಪಡೆದು ಪೂಜೆಯನ್ನು ಸಲ್ಲಿಸಿದರು. ಿನ್ನೂ ಅಳುತ್ತಿದ್ದ ಹರೀಶ್ ಮಗ ಹಾಗೂ ಪತ್ನಿಯ ಕೈಹಿಡಿದು ಸಮಾಧಾನವನ್ನು ಹೇಳಿದರು.
ಕ್ಯಾನ್ಸರ್ ರೋಗದಿಂದ ಬಳಲುತ್ತಿದ್ದ ಹರೀಶ್ ರಾಯ್ ಅವರ ಆರೋಗ್ಯ ಸ್ಥಿತಿ ಈಚೆಗೆ ತುಂಬಾನೇ ಹದಗೆಟ್ಟಿತ್ತು. ಇನ್ನೂ ಹರೀಶ್ ಅವರಿಗೆ ಯಶ್ ಅವರು ಆರ್ಥಿಕ ಸಹಾಯವನ್ನು ನೀಡಿದ್ದರು ಎಂದು ಸ್ವತಃ ಅವರೇ ಹೇಳಿದ್ದರು.
ಇದೀಗ ಅದೇ ಸ್ನೇಹಿತನ ಅಂತಿಮ ದರ್ಶನಕ್ಕೆ ರಾಕಿ ಭಾಯ್ ಬಂದೇ ಬಿಟ್ಟಿದ್ದಾರೆ.
ಕೆಜಿಎಫ್ ಚಿತ್ರದಲ್ಲಿ ಸಾಕಷ್ಟು ಪಾತ್ರಗಳು ಇವೆ. ಆದರೆ, ಈಗಲೂ ಈ ಚಿತ್ರದ ಒಂದು ಪಾತ್ರಗಳು ಜನರ ಮನದಲ್ಲಿದೆ. ಅದು ಬೇರೆ ಯಾವುದೋ ಅಲ್ಲ. ಅದು ಹರೀಶ್ ರಾಯ್ ನಿರ್ವಹಿಸಿದ ಖಾಸಿಂ ಚಾಚಾ ಪಾತ್ರವೇ ಆಗಿದೆ.
ಈ ಪಾತ್ರದ ಖದರ್ ಬೇರೆ ಇತ್ತು. ರಾಕಿ ಭಾಯ್‌ಗೆ ಸಾಥ್ ಕೊಡುವ ಪಾತ್ರವೇ ಇದಾಗಿತ್ತು. ಈ ಪಾತ್ರದಿಂದ ಹರೀಶ್ ರಾಯ್‌ಗೆ ಇನ್ನಷ್ಟು ಖ್ಯಾತಿ ತಂದುಕೊಟ್ಟಿತ್ತು.