Select Your Language

Notifications

webdunia
webdunia
webdunia
webdunia

ಯಶ್ ತಾಯಿ ಪುಪ್ಪಾ ನಿರ್ಮಾಣದ ಸಿನಿಮಾ ವಿರುದ್ಧ ನಟನಿಂದ ಗಂಭೀರ ಆರೋಪ

ನಟ ಯಶ್ ತಾಯಿ

Sampriya

ಬೆಂಗಳೂರು , ಮಂಗಳವಾರ, 16 ಸೆಪ್ಟಂಬರ್ 2025 (15:58 IST)
Photo Credit X
ನಟ ಯಶ್ ಅವರ ತಾಯಿ ಪುಪ್ಪಾ ಅರುಣ್ ಕುಮಾರ್‌ ನಿರ್ಮಾಣದಲ್ಲಿ ಮೂಡಿಬಂದ ಕೊತ್ತಲವಾಡಿ ಚಿತ್ರದ ತಂಡದ ವಿರುದ್ಧ ಸಿನಿಮಾದಲ್ಲಿ ಅಭಿನಯಿಸಿದ್ದ ನಟನೊಬ್ಬ ಗಂಭೀರ ಆರೋಪವನ್ನು ಮಾಡಿದ್ದಾರೆ. 

ನಾಯಕ ನಟ ಪೃಥ್ವಿ ಅಂಬಾರ್‌ನೊಂದಿಗೆ ಸಹನಟನಾಗಿ ಅಭಿನಯಿಸಿದ್ದ ಮಹೇಶ್ ಗುರು ಅವರು ಚಿತ್ರ ತಂಡದ ವಿರುದ್ಧ ಗಂಭೀರ ಆರೋಪ ಮಾಡಿ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹಂಚಿಕೊಂಡಿದ್ದಾರೆ. 

ಅದರಲ್ಲಿ ಸಿನಿಮಾ ಭರ್ಜರಿಯಾಗಿ ರಿಲೀಸ್ ಆಗಿ, ಇದೀಗ ಒಟಿಟಿಗೆ ಲಗ್ಗೆಯಿಡುತ್ತಿದ್ದರು ನನಗೆ ಮಾತ್ರ ಸಿಗಬೇಕಾದ ಸಂಭಾವನೆ ಇನ್ನೂ ಸಿಕ್ಕಿಲ್ಲ. 

ಈ ವಿಚಾರವಾಗಿ ಯಾರನ್ನು ಸಂಪರ್ಕಿಸಬೇಕೆಂದು ಗೊತ್ತಾಗಿಲ್ಲ. ನಿರ್ಮಾಪಕರನ್ನು ಸಂಪರ್ಕಕ್ಕೆ ಹೋಗುವುದು ಕಷ್ಟವಾಯಿತು ಎಂದು ತಮ್ಮ ಆಳಲನ್ನು ತೋಡಿಕೊಂಡಿದ್ದಾರೆ. 

ಈ ಸಂಬಂಧ ನಿರ್ದೇಶಕ ಶ್ರೀರಾಜ್ ಅವರು ಪ್ರತಿಕ್ರಿಯಿಸಿ, ಎಲ್ಲರಿಗೂ ಫೇಮೆಂಟ್ ಸರಿಯಾಗಿ ಸಿಕ್ಕಿದೆ ಎನ್ನುವ ಮೂಲಕ ಆರೋಪವನ್ನು ತಳ್ಳಿ ಹಾಕಿದ್ದಾರೆ. 

Share this Story:

Follow Webdunia kannada

ಮುಂದಿನ ಸುದ್ದಿ

ಅಂಬರೀಶ್ ಅಲ್ಲದೆ ಮತ್ತೊಬ್ಬ ಸ್ಟಾರ್ ನಟನಿಗೂ ಕರ್ನಾಟಕ ರತ್ನ ಕೊಡಿ ಎಂದು ಫ್ಯಾನ್ಸ್ ಬೇಡಿಕೆ