Webdunia - Bharat's app for daily news and videos

Install App

ಸ್ಟಾರ್ ಆದ್ರೂ ಬೇರು ಮರೆತಿಲ್ಲ! ಕಿರಾಣಿ ಅಂಗಡಿಗೆ ಬಂದು ಕುಲ್ಫೀ ಸವಿದ ಯಶ್-ರಾಧಿಕಾ

Krishnaveni K
ಶನಿವಾರ, 17 ಫೆಬ್ರವರಿ 2024 (10:53 IST)
Photo Courtesy: Twitter
ಬೆಂಗಳೂರು: ಕೆಜಿಎಫ್ ಸಿನಿಮಾ ಬಳಿಕ ರಾಕಿಂಗ್ ಸ್ಟಾರ್ ಯಶ್ ಎಂದರೆ ಪರಭಾಷೆಗಳಿಂದಲೂ ಭಾರೀ ಬೇಡಿಕೆ. ಯಶ್ ಎಲ್ಲೇ ಹೋದ್ರೂ ಅಭಿಮಾನಿಗಳು ಮುತ್ತಿಗೆ ಹಾಕುತ್ತಾರೆ. ಆದರೆ ಇದೀಗ ಯಶ್ ಮತ್ತು ಅವರ ಮುದ್ದಿನ ಮಡದಿ ರಾಧಿಕಾ ಕಿರಾಣಿ ಅಂಗಡಿಯೊಂದರಲ್ಲಿ ಸಾಮಾನ್ಯರಂತೇ ಕುಲ್ಫೀ ಸವಿಯುವ ಫೋಟೋವೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಯಶ್ ಮತ್ತು ರಾಧಿಕಾ ಸ್ಯಾಂಡಲ್ ವುಡ್ ನ ಐಡಿಯಲ್ ಕಪಲ್. ರೀಲ್ ನಿಂದ ರಿಯಲ್ ವರೆಗೆ ಎಲ್ಲರೂ ಜೋಡಿ ಎಂದರೆ ಹೀಗಿರಬೇಕು ಎನ್ನುವಂತಹ ಮುದ್ದಾದ ಜೋಡಿ.  ಇತ್ತೀಚೆಗೆ ಇಬ್ಬರೂ ವ್ಯಾಲೆಂಟೈನ್ಸ್ ಡೇ ಆಚರಿಸಿಕೊಂಡ ಫೋಟೋಗಳು ವೈರಲ್ ಆಗಿದ್ದವು. ಯಶ್ ಮತ್ತು ರಾಧಿಕಾ ಎಷ್ಟೇ ಶ್ರೀಮಂತಿಕೆ ಬಂದರೂ ತಮ್ಮ ಬೇರು ಮರೆತಿಲ್ಲ ಎನ್ನುವುದಕ್ಕೆ ಈಗ ಹರಿದಾಡುತ್ತಿರುವ ಫೋಟೋಗಳೇ ಸಾಕ್ಷಿ.

ಯಶ್ ಮತ್ತು ರಾಧಿಕಾ ತಮ್ಮ ಮನೆಯ ಬಳಿಕ ಕಿರಾಣಿ ಅಂಗಡಿಯೊಂದರಲ್ಲಿ ಕುಲ್ಫೀ ಸವಿದಿದ್ದಾರೆ. ಎಂದಿನಂತೇ ಹಿಂದೆ-ಮುಂದೆ ಬಾಡಿ ಗಾರ್ಡ್ ಗಳ ಸದ್ದುಗದ್ದಲವಿಲ್ಲದೇ ಸಾಮಾನ್ಯ ದಂಪತಿಯಂತೇ ಅಂಗಡಿಗೆ ಬಂದಿದ್ದು ನೋಡಿ ಎಲ್ಲರಿಗೂ ಶಾಕ್ ಆಗಿದೆ. ಯಶ್ ಮತ್ತು ರಾಧಿಕಾರನ್ನು ಗುರುತಿಸಿದ ಸ್ಥಳೀಯರು ಫೋಟೋಗೆ ಮುಗಿಬಿದ್ದಿದ್ದಾರೆ. ದಂಪತಿ ಕೂಡಾ ಖುಷಿಯಿಂದಲೇ ಜನರ ಜೊತೆ ಪೋಸ್ ಕೊಟ್ಟು ಕುಲ್ಫೀ ಸವಿದು ಕ್ವಾಲಿಟಿ ಟೈಂ ಕಳೆದು ಅಲ್ಲಿಂದ ತೆರಳಿದ್ದಾರೆ. ಜೋಡಿ ಎಂದರೆ ಹೀಗಿರಬೇಕು, ಪ್ರೀತಿಸುವುದು ಹೇಗೆ ಎಂದು ಈ ಜೋಡಿಯನ್ನು ನೋಡಿ ಕಲಿಯಬೇಕು ಎಂದು ಈಗ ನೆಟ್ಟಿಗರು ಕಾಮೆಂಟ್ ಮಾಡುತ್ತಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

Sanjay Kapur: ವಿಮಾನ ಅಪಘಾತಕ್ಕೆ ಸಂತಾಪ ಸೂಚಿಸಿದ ಬೆನ್ನಲ್ಲೇ ಕರೀಷ್ಮಾ ಕಪೂರ್ ಮಾಜಿ ಪತಿ ಸಾವು

Air India Flight Crash: ದುರ್ಘಟನೆಯಿಂದ ಹೃದಯ ಒಡೆದಿದೆ, ಬಾಲಿವುಡ್‌ ನಟ, ನಟಿಯರು ಭಾವುಕ

ಬರ್ತ್‌ಡೇ ಪಾರ್ಟಿಯಲ್ಲಿ ಲೋಕಲ್‌ ಡ್ರಿಂಕ್ಸ್‌ ಮಾತ್ರ ಇತ್ತು: ಅ‍ಪಪ್ರಚಾರ ಮಾಡಬೇಡಿ ಎಂದು ಗೊಗರೆದ ಮಂಗ್ಲಿ

Kantara Chapter 1: ಕಾಂತಾರ ಚಾಪ್ಟರ್ 1 ಸಿನಿಮಾದ ಮತ್ತೊಬ್ಬ ಕಲಾವಿದ ಇನ್ನಿಲ್ಲ: ಹೀಗೆ ಯಾಕಾಗುತ್ತಿದೆ

Shilpa Shetty: ಬರ್ತಡೇ ಪಾರ್ಟಿಯಲ್ಲಿ ವಿದೇಶಿ ಮಹಿಳೆ ಜತೆ ಶಿಲ್ಪಾ ಶೆಟ್ಟಿ ರಂಪಾಟ, ಕಾರಣ ಬಿಚ್ಚಿಟ್ಟ ರಾಜ್‌ ಕುಂದ್ರಾ

ಮುಂದಿನ ಸುದ್ದಿ
Show comments