Publish Date: Sun, 12 Apr 2020 (08:45 IST)
Updated Date: Sun, 12 Apr 2020 (08:46 IST)
ಬೆಂಗಳೂರು: ಕೆಜಿಎಫ್ 2 ಸಿನಿಮಾದ ಟೀಸರ್ ಇಂದು ಬರುತ್ತೆ ನಾಳೆ ಬರುತ್ತೆ ಎಂಬ ಭರವಸೆಯಲ್ಲೇ ಕಾದು ಕಾದು ಬೇಸತ್ತ ರಾಕಿಂಗ್ ಸ್ಟಾರ್ ಯಶ್ ಅಭಿಮಾನಿಗಳು ಈಗ ಹೊಸ ನಿರ್ಧಾರ ಕೈಗೊಂಡಿದ್ದಾರೆ.
ಎಲ್ಲಾ ಸರಿ ಹೋಗಿದ್ದರೆ ಜನವರಿ 8 ರಂದು ಯಶ್ ಬರ್ತ್ ಡೇ ದಿನವೇ ಟೀಸರ್ ಬರಬೇಕಿತ್ತು. ಆದರೆ ತಾಂತ್ರಿಕ ಕಾರಣಗಳಿಂದ ಆಗುತ್ತಿಲ್ಲ ಎಂದು ನಿರ್ದೇಶಕ ಪ್ರಶಾಂತ್ ನೀಲ್ ಹೇಳಿದ್ದರು. ಟೀಸರ್ ಬರುತ್ತೆ ಎಂದು ಕಳೆದ ನಾಲ್ಕು ತಿಂಗಳಿನಿಂದ ಕಾದು ಬೇಸತ್ತಿರುವ ಅಭಿಮಾನಿಗಳು ಈಗ ಸೋಷಿಯಲ್ ಮೀಡಿಯಾದಲ್ಲಿ ಟ್ರೆಂಡ್ ಮಾಡಿ ಚಿತ್ರತಂಡಕ್ಕೆ ಬಿಸಿ ಮುಟ್ಟಿಸುವ ಕೆಲಸ ಮಾಡಲು ನಿರ್ಧರಿಸಿದ್ದಾರೆ.
ಇಂದು ಸಂಜೆ ಟ್ವಿಟರ್ ಟ್ರೆಂಡ್ ಅಭಿಯಾನ ಮಾಡಲಿರುವ ರಾಕಿಂಗ್ ಅಭಿಮಾನಿಗಳು ತಕ್ಷಣವೇ ಟೀಸರ್ ಬಿಡುಗಡೆ ಮಾಡುವಂಥೆ ಒತ್ತಾಯಿಸಲಿದ್ದಾರೆ. ಇದರಲ್ಲಿ ಎಲ್ಲಾ ರಾಕಿಂಗ್ ಸ್ಟಾರ್ ಅಭಿಮಾನಿಗಳ ಬಳಗವೂ ಸೇರಿಕೊಳ್ಳಲಿದೆ.