ಬೆಂಗಳೂರು: ಕೊರೋನಾವೈರಸ್ ಬಗ್ಗೆ ಮತ್ತು ಕ್ವಾರಂಟೈನ್ ಅವಧಿ ಬಗ್ಗೆ ಜನರಲ್ಲಿ ಅರಿವು ಮೂಡಿಸುವ ಕಾರ್ಯಕ್ರಮಕ್ಕೆ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ರಾಜ್ಯ ಸರ್ಕಾರದ ಜತೆ ಕೈ ಜೋಡಿಸಲಿದ್ದಾರೆ.
ಪವರ್ ಸ್ಟಾರ್ ಭೇಟಿಯಾದ ಉಪ ಮುಖ್ಯಮಂತ್ರಿ ಅಶ್ವಥ್ ನಾರಾಯಣ ಸರ್ಕಾರದ ಜತೆ ಜಾಗೃತಿ ಮೂಡಿಸಲು ನೆರವಾಗುವಂತೆ ಮನವಿ ಮಾಡಿದ್ದಾರೆ. ಕೇಂದ್ರ ಸರ್ಕಾರ ಜನರಿಗೆ ಅರಿವು ಮೂಡಿಸಲು ಆರೋಗ್ಯ ಸೇತು ಎಂಬ ಹೊಸ ಆಪ್ ಲಾಂಚ್ ಮಾಡಿದೆ.
ಈ ಆಪ್ ಬಗ್ಗೆ ಪುನೀತ್ ಜಾಗೃತಿ ಮೂಡಿಸಲಿದ್ದಾರೆ. ಇಲ್ಲಿ ಕೊರೋನಾ, ಕ್ವಾರಂಟೈನ್ ಅವಧಿ, ಕೊರೋನಾ ಲಕ್ಷಣಗಳ ಬಗ್ಗೆ ವಿವರವಾದ ಮಾಹಿತಿ ಲಭ್ಯವಿರಲಿದೆ.