Select Your Language

Notifications

webdunia
webdunia
webdunia
webdunia

ಹನಿಮೂಡ್ ಮೂಡ್‌ನಿಂದ ಹೊರಬಂದ ರಾಕಿಂಗ್ ಸ್ಟಾರ್

ಹನಿಮೂಡ್ ಮೂಡ್‌ನಿಂದ ಹೊರಬಂದ ರಾಕಿಂಗ್ ಸ್ಟಾರ್
Bangalore , ಭಾನುವಾರ, 22 ಜನವರಿ 2017 (09:23 IST)
ರಾಕಿಂಗ್ ಸ್ಟಾರ್ ಯಶ್ ಹನಿಮೂನ್ ಮೂಡ್ ನಿಂದ ಹೊರಬಂದಿದ್ದಾರೆ. ರಾಧಿಕಾ ಪಂಡಿತ್ ಅವರನ್ನು ಮದುವೆಯಾದ ಮೇಲೆ ಯಶ್ ಹನಿಮೂನ್ ಮೂಡ್‌ನಲ್ಲಿದ್ದರು. ಈಗ ಎಲ್ಲವನ್ನೂ ಮುಗಿಸಿಕೊಂಡು ಅವರು ಮತ್ತೆ ಸ್ಯಾಂಡಲ್‍ವುಡ್‌ಗೆ ಹಿಂತಿರುಗಿದ್ದಾರೆ. 
 
ಫೆಬ್ರವರಿ 1ರಿಂದ ಅವರ ಕೆಜಿಎಫ್ ಶೂಟಿಂಗ್ ಆರಂಭವಾಗಲಿದೆ. ಉಗ್ರಂ ಖ್ಯಾತಿಯ ನಿರ್ದೇಶಕ ಪ್ರಶಾಂತ್ ನೀಲ್ ಆಕ್ಷನ್ ಕಟ್ ಹೇಳುತ್ತಿರುವ ಸಿನಿಮಾ ಇದು. ಸದ್ಯಕ್ಕೆ ಪ್ರೀಪ್ರೊಡಕ್ಷನ್ ಕೊನೆಯ ಹಂತದಲ್ಲಿದೆ ಕೆಜಿಎಫ್.
 
ಕೋಲಾರದಲ್ಲಿ 1970 ಮತ್ತು 80ರ ದಶಕದಲ್ಲಿ ನಡೆದಂತಹ ಕಥೆ ಇದು. ಈಗಾಗಲೆ ಈ ಚಿತ್ರದ ಮುಹೂರ್ತ ನಡೆದಿದ್ದು, ಸುಮಾರು 40 ಕೋಟಿ ರೂಪಾಯಿ ಬಜೆಟ್‌ನಲ್ಲಿ ಈ ಚಿತ್ರವನ್ನು ನಿರ್ಮಿಸಲಾಗುತ್ತಿದೆ. ಕನ್ನಡ ಚಿತ್ರರಂಗದಲ್ಲೇ ಅತ್ಯಂತ ದುಬಾರಿ ಬಜೆಟ್ ಸಿನಿಮಾ ಇದು.  

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

’ಬಾಹುಬಲಿ 2’ ರಿಲೀಸ್ ಬಳಿಕ ಪ್ರಭಾಸ್ ಮದುವೆ