Select Your Language

Notifications

webdunia
webdunia
webdunia
webdunia

’ಬಾಹುಬಲಿ 2’ ರಿಲೀಸ್ ಬಳಿಕ ಪ್ರಭಾಸ್ ಮದುವೆ

’ಬಾಹುಬಲಿ 2’ ರಿಲೀಸ್ ಬಳಿಕ ಪ್ರಭಾಸ್ ಮದುವೆ
Hyderabad , ಶನಿವಾರ, 21 ಜನವರಿ 2017 (15:29 IST)
ಯಂಗ್ ರೆಬಲ್ ಸ್ಟಾರ್ ಪ್ರಭಾಸ್ ಮದುವೆಗೆ ಕಂಕಣಬಲ ಕೂಡಿಬಂದಿದೆ. ಅಭಿಮಾನಿಗಳು ಇನ್ನು ಜಾಸ್ತಿ ದಿನ ಎದುರು ನೋಡುವಂತಿಲ್ಲ. ಇನ್ನೇನು ಕೆಲವೇ ದಿನಗಳು ಮಾತ್ರ ಬಾಕಿ. ಇತ್ತೀಚೆಗೆ ಬಾಹುಬಲಿ 2 ಶೂಟಿಂಗ್ ಮುಗಿಸಿಕೊಂಡಿರುವ ಪ್ರಭಾಸ್, ಹಾಲಿಡೇಸನ್ನು ಎಂಜಾಯ್ ಮಾಡುತ್ತಿದ್ದಾರೆ. ಚಿತ್ರ ಬಿಡುಗಡೆ ಬಳಿಕ ಮದುವೆಯಾಗಲು ನಿರ್ಧರಿಸಿದ್ದಾರೆ.
 
ಸ್ವತಃ ಈ ವಿಷಯವನ್ನು ಪ್ರಭಾಸ್ ದೊಡ್ಡಪ್ಪ ಕೃಷ್ಣಂರಾಜು ತಿಳಿಸಿದ್ದಾರೆ. ಬಾಹುಬಲಿ 2 ಬಿಡುಗಡೆ ಬಳಿಕ ಸುಜಿತ್ ನಿರ್ದೇಶನದ ಚಿತ್ರದಲ್ಲಿ ಪ್ರಭಾಸ್ ಅಭಿನಯಿಸಲಿದ್ದಾರೆ. ಆ ಸಿನಿಮಾ ಆರಂಭವಾಗುವುದಕ್ಕೂ ಮುನ್ನವೇ ಪ್ರಭಾಸ್ ಮದುವೆ ನಡೆಯಲಿದೆ ಎಂದು ಕೃಷ್ಣಂರಾಜು ತಿಳಿಸಿದ್ದಾರೆ.
 
ಇಷ್ಟಕ್ಕು ಪ್ರಭಾಸ್ ಕೈಹಿಡಿಯುತ್ತಿರುವ ಹುಡುಗಿ ಗೋದಾವರಿ ಜಿಲ್ಲೆಯವರಂತೆ. ಆಕೆ ಯಾರು, ಏನು ಎತ್ತ ಎಂಬುದನ್ನು ಅಧಿಕೃತವಾಗಿ ಪ್ರಕಟಿಸುತ್ತೇವೆ ಎಂದಿದ್ದಾರೆ ಕೃಷ್ಣಂರಾಜು. ಬಾಹುಬಲಿ 2 ಚಿತ್ರಕ್ಕಾಗಿ ಮೂರುವರೆ ವರ್ಷಗಳ ಕಾಲ ಪ್ರಭಾಸ್ ಮೀಸಲಿಟ್ಟಿದ್ದರು. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಜಲ್ಲಿಕಟ್ಟುಗೆ ರಾಮ್ ಗೋಪಾಲ್ ವರ್ಮಾ ತೀವ್ರ ವಿರೋಧ