Webdunia - Bharat's app for daily news and videos

Install App

ಕಾಟೇರ ಸಿನಿಮಾ ತಂಡದವರಿಗೆ ಕಾರು ಗಿಫ್ಟ್ ಮಾಡಿದ ರಾಕ್ ಲೈನ್ ವೆಂಕಟೇಶ್

Krishnaveni K
ಶುಕ್ರವಾರ, 3 ಮೇ 2024 (10:29 IST)
Photo Courtesy: X
ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ನಾಯಕರಾಗಿರುವ ಕಾಟೇರ ಸಿನಿಮಾ 100 ನೇ ದಿನ ಸಕ್ಸಸ್ ಪಾರ್ಟಿಯನ್ನು ಆಯೋಜಿಸಲಾಗಿತ್ತು. ಈ ವೇಳೆ ನಿರ್ಮಾಪಕ ರಾಕ್ ಲೈನ್ ಚಿತ್ರಕ್ಕಾಗಿ ದುಡಿದ ತಂತ್ರಜ್ಞರಿಗೆ ಕಾರು ಗಿಫ್ಟ್ ಮಾಡಿದ್ದಾರೆ.

ಕಾಟೇರ ಸಿನಿಮಾಗೆ ಕತೆ ಬರೆದ ಜಡೇಶ್ ಕುಮಾರ್ ಹಂಪಿ, ಸಂಭಾಷಣೆ ಬರೆದ ಮಾಸ್ತಿ ಮತ್ತು ನಟಿಸಿದ್ದ ಸೂರಜ್ ಗೆ ತಲಾ ಒಂದು ಕಾರು ಗಿಫ್ಟ್ ಮಾಡಲಾಗಿದೆ. ಸಾಮಾನ್ಯವಾಗಿ ಒಂದು ಸಿನಿಮಾ ಸಕ್ಸಸ್ ಆದ ಬಳಿಕ ತಂತ್ರಜ್ಞರನ್ನು ಯಾರೂ ಗುರುತಿಸುವುದೇ ಇಲ್ಲ. ಆದರೆ ಈ ಸಿನಿಮಾದಲ್ಲಿ ತಂತ್ರಜ್ಞರಿಗೆ ಈ ರೀತಿ ಗೌರವ ಸೂಚಿಸಲಾಗಿದೆ.

ಈ ಬಗ್ಗೆ ಪತ್ರಿಕಾಗೋಷ್ಠಿ ನಡೆಸಿದ ರಾಕ್ ಲೈನ್ ವೆಂಕಟೇಶ್ ಈ ಮೂವರಿಗೆ ಕಾರು ನೀಡಲು ತೀರ್ಮಾನಿಸಿದ್ದು ಯಾಕೆ ಎಂದೂ ಹೇಳಿದರು. ಸಿನಿಮಾ ಬಿಡುಗಡೆ ಬಳಿಕ ನಟ ಸೂರಜ್ ಗೆ ಅಪಘಾತವಾಗಿ ಸಂಕಷ್ಟಕ್ಕೀಡಾದರು. ಹೀಗಾಗಿ ಅವರಿಗೆ ಕಾರು ನೀಡಲು ತೀರ್ಮಾನಿಸಿದೆವು. ಜೊತೆಗೆ ಚಿತ್ರಕ್ಕೆ ಉತ್ತಮ ಸಂಭಾಷಣೆ, ಕತೆ ಬರೆದ ಮಾಸ್ತಿ, ಜಡೇಶ್ ಗೂ ಕಾರು ನೀಡಲು ತೀರ್ಮಾನಿಸಿದೆವು. ನಾನ, ದರ್ಶನ್, ತರುಣ್ ಸೇರಿಕೊಂಡು ಈ ತೀರ್ಮಾನ ಮಾಡಿದೆವು’ ಎಂದು ರಾಕ್ ಲೈನ್ ಹೇಳಿದ್ದಾರೆ.

ಕಾರು ನೀಡಿದ ಬಳಿಕ ಜಡೇಶ್ ನಟ ದರ್ಶನ್ ಬಳಿ ಕಾರು ಚಲಾಯಿಸಿ ಶುಭಾರಂಭ ಮಾಡಲು ಮನವಿ ಮಾಡಿದರು. ಅದರಂತೆ ದರ್ಶನ್ ಜಡೇಶ್ ಕಾರನ್ನು ಚಲಾಯಿಸಿ ಅವರಿಗೆ ಖುಷಿಕೊಟ್ಟರು. ಕಾಟೇರ ಚಿತ್ರತಂಡದ ಈ ನಡೆಗೆ ಮೆಚ್ಚುಗೆ ವ್ಯಕ್ತವಾಗಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

Air India Flight Crash: ದುರ್ಘಟನೆಯಿಂದ ಹೃದಯ ಒಡೆದಿದೆ, ಬಾಲಿವುಡ್‌ ನಟ, ನಟಿಯರು ಭಾವುಕ

ಬರ್ತ್‌ಡೇ ಪಾರ್ಟಿಯಲ್ಲಿ ಲೋಕಲ್‌ ಡ್ರಿಂಕ್ಸ್‌ ಮಾತ್ರ ಇತ್ತು: ಅ‍ಪಪ್ರಚಾರ ಮಾಡಬೇಡಿ ಎಂದು ಗೊಗರೆದ ಮಂಗ್ಲಿ

Kantara Chapter 1: ಕಾಂತಾರ ಚಾಪ್ಟರ್ 1 ಸಿನಿಮಾದ ಮತ್ತೊಬ್ಬ ಕಲಾವಿದ ಇನ್ನಿಲ್ಲ: ಹೀಗೆ ಯಾಕಾಗುತ್ತಿದೆ

Shilpa Shetty: ಬರ್ತಡೇ ಪಾರ್ಟಿಯಲ್ಲಿ ವಿದೇಶಿ ಮಹಿಳೆ ಜತೆ ಶಿಲ್ಪಾ ಶೆಟ್ಟಿ ರಂಪಾಟ, ಕಾರಣ ಬಿಚ್ಚಿಟ್ಟ ರಾಜ್‌ ಕುಂದ್ರಾ

ಅನಿರುದ್ಧ್‌ ಸಾಮಾಜಿಕ ಕಳಕಳಿಗೆ ಎಚ್ಚೆತ್ತ ಬಿಬಿಎಂಪಿ, ನಟ ಕಾರ್ಯವೈಖರಿಗೆ ಭಾರೀ ಮೆಚ್ಚುಗೆ, Video

ಮುಂದಿನ ಸುದ್ದಿ
Show comments