ಬೆಂಗಳೂರು: ನಿನಗಾಗಿ ಸೀರಿಯಲ್‌ನ ಜೀವ ಖ್ಯಾತಿಯ ನಟ ರಿತ್ವಿಕ್ ಅವರು ಹೆಣ್ಣು ಮಗುವನ್ನು ಬರಮಾಡಿಕೊಳ್ಳುವ ಮೂಲಕ ತಂದೆಯಾಗಿ ಬಡ್ತಿ ಹೊಂದಿದ್ದಾರೆ. ರಿತ್ವಿಕ್ ಅವರ ಪತ್ನಿ ಸುಮನ್ ಅವರ ಸೀಮಂತ ಸಂಭ್ರಮ ಈಚೆಗೆ ಅದ್ಧೂರಿಯಾಗಿ ನಡೆದಿದ್ದು. ಈ ಸಂಭ್ರಮದಲ್ಲಿ ನಟಿ ದಿವ್ಯಾ ಉರುಡುಗ ಸೇರಿದಂತೆ ಹಲವು ಕಲಾವಿದರು ಪಾಲ್ಗೊಂಡಿದ್ದರು.
ಗಿಣಿರಾಮ, ನಿನಗಾಗಿ ಖ್ಯಾತಿಯ ನಟ ರಿತ್ವಿಕ್ ಮಠದ್ ಮನೆಯಲ್ಲಿ ಸಂಭ್ರಮ ಮನೆ ಮಾಡಿದೆ. ಮಗುವಿನ ಆಗಮನದ ಬಗ್ಗೆ ನಟ ರಿತ್ವಿಕ್ ಅವರು ತಮ್ಮ ಸಾಮಾಜಿಕ ಜಾಲತಾಣ ಇನ್‌ಸ್ಟಾಗ್ರಾಂನಲ್ಲಿ ಶೇರ್ ಮಾಡಿ, ತಂದೆಯ ಪುಟ್ಟ ರಾಜಕುಮಾರಿಯ ಆಗಮನವಾಗಿ ಎಂದು ಬರೆದುಕೊಂಡಿದ್ದಾರೆ. ಮಗುವನ್ನು ಎತ್ತಿಕೊಂಡಿರುವ ಫೋಟೋವನ್ನು ಶೇರ್ ಮಾಡಿಕೊಂಡಿದ್ದಾರೆ.
ಕಲರ್ಸ್ ಕನ್ನಡ ವಾಹಿನಿಯಲ್ಲಿ ನಿನಗಾಗಿ ಸೀರಿಯಲ್ ಟಾಪ್ ರೇಟಿಂಗ್‌ನಲ್ಲಿ ಪ್ರಸಾರವಾಗುತ್ತಿದ್ದು, ರಿತ್ವಿಕ್ ಅವರು ಜೀವ ಪಾತ್ರಕ್ಕೆ ಅದ್ಭುತವಾಗಿ ಜೀವತುಂಬುತ್ತಿದ್ದಾರೆ.
ಇನ್ನೂ ಹಲವು ಸಿನಿಮಾಗಳಲ್ಲೂ ಇವರು ನಟಿಸಿದ್ದಾರೆ.