ಬೆಂಗಳೂರು: ನಟ ದರ್ಶನ್ ಜೈಲಿಗೆ ಹೋದರೆ ಚಿತ್ರರಂಗಕ್ಕೆ ನಷ್ಟ. ಅವರಿದ್ದರೆ ಚಿತ್ರರಂಗದಲ್ಲಿ ಎಷ್ಟೋ ಜನರಿಗೆ ಕೆಲಸ ಸಿಗುತ್ತದೆ, ಜೇಬು ತುಂಬುತ್ತದೆ ಎನ್ನುವವರಿಗೆ ನಟಿ ರಮ್ಯಾ ಹೇಳಿದ್ದೇನು ಗೊತ್ತಾ?
ರೇಣುಕಾಸ್ವಾಮಿ ಮರ್ಡರ್ ಕೇಸ್ ನಲ್ಲಿ ದರ್ಶನ್ ಅರೆಸ್ಟ್ ಆದ ಬಳಿಕ ಹಲವರು ಅವರಿಲ್ಲದಿದ್ದರೆ ಚಿತ್ರರಂಗಕ್ಕೇ ನಷ್ಟ ಎನ್ನುತ್ತಿದ್ದಾರೆ. ವಾಣಿಜ್ಯ ಮಂಡಳಿಯ ಉಮೇಶ್ ಬಣಕಾರ್, ನಟಿ ಉಮಾಶ್ರೀ ಸೇರಿದಂತೆ ಹಲವರು ದರ್ಶನ್ ಇಲ್ಲದೇ ಚಿತ್ರರಂಗಕ್ಕೇ ದೊಡ್ಡ ಲಾಸ್ ಎಂದಿದ್ದರು.
ಇದರ ಬಗ್ಗೆ ನಟಿ ರಮ್ಯಾ ಹೇಳಿದ್ದೇ ಬೇರೆ. ಯಾರೋ ಒಬ್ಬರಿಂದ ಚಿತ್ರರಂಗ ಅಲ್ಲ. ಈಗ ಸು ಫ್ರಮ್ ಸೋ ಸಿನಿಮಾ ಗೆಲ್ಲಿಲ್ವಾ? ಅದರಲ್ಲಿ ಯಾರು ಸ್ಟಾರ್ ಇದ್ರು? ಒಳ್ಳೆಯ ಕತೆ ಇರಬೇಕಷ್ಟೇ. ಕತೆ ಇದ್ದರೆ ಜನ ಸಿನಿಮಾ ನೋಡ್ತಾರೆ. ಇಲ್ಲಿ ಸ್ಟಾರ್ ಮುಖ್ಯವಲ್ಲ ಎಂದಿದ್ದಾರೆ. ಸು ಫ್ರಮ್ ಸೋ ಸಿನಿಮಾ ದೊಡ್ಡ ಬಜೆಟ್ ಸಿನಿಮಾ ಅಲ್ಲ. ಅಲ್ಲಿ ಯಾರೂ ಸ್ಟಾರ್ ಇರಲಿಲ್ಲ. ಜೆಪಿ ತುಮಿನಾಡು ಅವರು ನಿರ್ದೇಶಿಸಿದ ಸಿನಿಮಾ. ಅವರು ರಾಜ್ ಬಿ ಶೆಟ್ಟಿ ಮಾಡಿದ ಸಿನಿಮಾ. ಯಾರು ಸ್ಟಾರ್ ಗಳಿಲ್ಲದಿದ್ದರೂ ಗೆದ್ದಿದೆ ಎಂದಿದ್ದಾರೆ. ಆ ಮೂಲಕ ದರ್ಶನ್ ಇದ್ದರೇ ಚಿತ್ರರಂಗಕ್ಕೆ ಲಾಭ ಎಂದವರಿಗೆ ಪರೋಕ್ಷವಾಗಿ ತಿರುಗೇಟು ಕೊಟ್ಟಿದ್ದಾರೆ.