Select Your Language

Notifications

webdunia
webdunia
webdunia
webdunia

ಬಾಲಿವುಡ್ ಸಿನಿಮಾದಲ್ಲಿ ದೇಶದ ಬಗ್ಗೆ ಕೆಟ್ಟದಾಗಿ ತೋರಿಸಲಾಗಿದೆ: ರಿಷಬ್ ಶೆಟ್ಟಿ ಹೇಳಿಕೆ ತಪ್ಪಾ ಸರಿಯಾ ನೀವೇ ಹೇಳಿ

Rishab Shetty

Krishnaveni K

ಬೆಂಗಳೂರು , ಬುಧವಾರ, 21 ಆಗಸ್ಟ್ 2024 (10:31 IST)
ಬೆಂಗಳೂರು: ಲಾಫಿಂಗ್ ಬುದ್ಧ ಸಿನಿಮಾ ಪ್ರಮೋಷನ್ ವೇಳೆ ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ ಬಾಲಿವುಡ್ ಬಗ್ಗೆ ನೀಡಿದ ಹೇಳಿಕೆಯೊಂದು ಈಗ ಕೊಂಚ ವಿವಾದಕ್ಕೆ ಕಾರಣವಾಗಿದೆ.

ತಮ್ಮ ನಿರ್ಮಾಣದಿಂದ ಪ್ರಮೋದ್ ಶೆಟ್ಟಿ ನಾಯಕರಾಗಿರುವ ಲಾಫಿಂಗ್ ಬುದ್ಧ ಸಿನಿಮಾದ ಪ್ರಮೋಷನ್ ಗಾಗಿ ಯೂ ಟ್ಯೂಬ್ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಬಾಲಿವುಡ್ ಸಿನಿಮಾಗಳ ಬಗ್ಗೆ ಮಾತನಾಡಿದ್ದಾರೆ. ಆದರೆ ಅವರ ಈ ಹೇಳಿಕೆ ಈಗ ಪರ-ವಿರೋಧ ಚರ್ಚೆ ಹುಟ್ಟುಹಾಕಿದೆ.

‘ಭಾರತೀಯ ಸಿನಿಮಾಗಳು ಅದರಲ್ಲೂ ವಿಶೇಷವಾಗಿ ಬಾಲಿವುಡ್ ಸಿನಿಮಾಗಳಲ್ಲಿ ಭಾರತದ ಬಗ್ಗೆ ತುಂಬಾ ಕೆಟ್ಟದಾಗಿ ತೋರಿಸಿ ಹೊರಗೆ ಅಂತಾರಾಷ್ಟ್ರೀಯ ಫಿಲಂ ಫೆಸ್ಟಿವಲ್ ಗಳಿಗೆ ಹೋಗಿ ಪ್ರಶಸ್ತಿ ಗೆದ್ದುಕೊಂಡು ಬಂದಿದ್ದನ್ನು ನೋಡಿದ್ದೇನೆ. ಆದರೆ ನಮ್ಮ ದೇಶ ನಮ್ಮ ಹೆಮ್ಮೆ, ನಮ್ಮ ರಾಜ್ಯ ನಮ್ಮ ಹೆಮ್ಮೆ. ಹಾಗಾಗಿ ನಮ್ಮಲ್ಲಿರುವ ಪಾಸಿಟಿವ್ ವಿಚಾರಗಳನ್ನು ಯಾಕೆ ತೋರಿಸಬಾರದು’ ಎಂದಿದ್ದರು.

ಅವರ ಈ ಹೇಳಿಕೆ ಈಗ ವೈರಲ್ ಆಗಿದೆ. ಕೆಲವರು ರಿಷಬ್ ಹೇಳಿಕೆಯನ್ನು ಬೆಂಬಲಿಸಿದ್ದರೆ ಮತ್ತೆ ಕೆಲವು ಬಾಲಿವುಡ್ ಅಭಿಮಾನಿಗಳು ರಿಷಬ್ ವಿರುದ್ಧ ಕೆಂಡ ಕಾರಿವೆ. ರಿಷಬ್ ಗೆ ಹೊಟ್ಟೆ ಉರಿ, ಅಂತಾರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಬಾಲಿವುಡ್ ಸಿನಿಮಾಗಳಿಗೆ ಮಾತ್ರ ಬೇಡಿಕೆಯಿದೆ. ಕೆಲವು ಸೌತ್ ಇಂಡಿಯಾ ಸಿನಿಮಾದವರಿಗೆ ತಮ್ಮ ಭಾಷೆ ಮೇಲೆ ಅಂದಾಭಿಮಾನ ಎಂದು ಕೆಲವರು ಟೀಕೆ ಮಾಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಗುಡ್ಡ ಕುಸಿತದ ಬಗ್ಗೆ ರಿಷಬ್ ಶೆಟ್ಟಿ ಹೇಳಿದ ನೈಜ ಸತ್ಯಗಳು