Publish Date: Sat, 26 Sep 2020 (11:01 IST)
Updated Date: Sat, 26 Sep 2020 (11:03 IST)
ಬೆಂಗಳೂರು: ನಟ, ನಿರ್ದೇಶಕ ರಿಷಬ್ ಶೆಟ್ಟಿ ಮಲಯಾಳಂನ ಖ್ಯಾತ ನಿರ್ದೇಶಕ ದಿಲೀಶ್ ಪೋಥನ್ ಜತೆಗಿರುವ ಫೋಟೋವೊಂದನ್ನು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿದ್ದು, ಅಭಿಮಾನಿಗಳಲ್ಲಿ ಗುಸು ಗುಸು ಶುರುವಾಗಿದೆ.
ಈ ಅದ್ಭುತ ನಿರ್ದೇಶಕನನ್ನು ಭೇಟಿಯಾದೆ ಎಂದಷ್ಟೇ ರಿಷಬ್ ಬರೆದುಕೊಂಡಿದ್ದಾರೆ. ಆದರೆ ರಿಷಬ್ ಫೋಟೋ ನೋಡಿ ಅಭಿಮಾನಿಗಳು ಮಲಯಾಳಂ ಸಿನಿಮಾ ಮಾಡುವ ಯೋಚನೆಯಿದೆಯೇ? ಮಲ್ಟಿ ಲ್ಯಾಂಗ್ವೇಜ್ ಸಿನಿಮಾ ಮಾಡ್ತೀರಾ ಎಂದೆಲ್ಲಾ ಪ್ರಶ್ನೆ ಕೇಳಿದ್ದಾರೆ. ಆದರೆ ಇದಕ್ಕೆ ರಿಷಬ್ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಇದೊಂದು ಸೌಹಾರ್ದಯುತ ಭೇಟಿಯೇ ಅಥವಾ ಸಿನಿಮಾ ಉದ್ದೇಶಕ್ಕಾಗಿ ಭೇಟಿಯಾಗಿದ್ದೇ ಎಂಬುದು ಸದ್ಯದಲ್ಲೇ ಉತ್ತರ ಸಿಗಲಿ.