Webdunia - Bharat's app for daily news and videos

Install App

ಕಾಂತಾರ ಚಾಪ್ಟರ್ 1 ಗಾಗಿ ಕಳರಿಪಯಟ್ಟು ಕಲಿಯುತ್ತಿರುವ ರಿಷಬ್ ಶೆಟ್ಟಿ: ಫೋಟೋ ವೈರಲ್

Krishnaveni K
ಗುರುವಾರ, 22 ಆಗಸ್ಟ್ 2024 (11:11 IST)
ಬೆಂಗಳೂರು: ಕಾಂತಾರ ಚಾಪ್ಟರ್ 1 ಸಿನಿಮಾಗಾಗಿ ರಿಷಬ್ ಶೆಟ್ಟಿ ಭರ್ಜರಿ ತಯಾರಿ ಮಾಡಿಕೊಂಡಿದ್ದಾರೆ. ಈ ಸಿನಿಮಾದ ಸಾಹಸ ದೃಶ್ಯಗಳಿಗಾಗಿ ರಿಷಬ್ ಕಳರಿಪಯಟ್ಟು ಕಲಿಯುತ್ತಿರುವ ಫೋಟೋವೊಂದನ್ನು ಅವರೇ ಪ್ರಕಟಿಸಿದ್ದು ವೈರಲ್ ಆಗಿದೆ.

ಕಾಂತಾರ ಸಕ್ಸಸ್ ಆದ ಮೇಲೆ ರಿಷಬ್ ಸಾಕಷ್ಟು ತಯಾರಿ ಮಾಡಿಕೊಂಡೇ ಕಾಂತಾರ ಚಾಪ್ಟರ್ 1 ಶೂಟಿಂಗ್ ಆರಂಭಿಸಿದ್ದರು. ಈ ಸಿನಿಮಾದ ಕತೆ ಕದಂಬರ ಕಾಲದ್ದು ಎಂದು ಈಗಾಗಲೇ ರಿಷಬ್ ಸುಳಿವು ಕೊಟ್ಟಿದ್ದಾರೆ. ಹೀಗಾಗಿ ರಿಷಬ್ ವೇಷಭೂಷಣ, ಹಾವ ಭಾವಗಳೂ ಆ ಕಾಲಕ್ಕೆ ತಕ್ಕಂತೇ ಇರಲಿದೆ.

ಈ ಸಿನಿಮಾದ ಸಾಹಸ ದೃಶ್ಯಗಳು ವಿಶೇಷವಾಗಿರಲಿದೆ. ಇದಕ್ಕಾಗಿ ಕೇರಳ ಮೂಲದ ಸಾಹಸ ಕಲೆ ಕಳರಿಪಯಟ್ಟು ಕಲಿಯಲಿದ್ದಾರೆ ಎಂದು ಈಗಾಗಲೇ ಸುದ್ದಿಗಳಿತ್ತು. ಇದೀಗ ಅದನ್ನು ರಿಷಬ್ ಅವರೇ ಫೋಟೋ ಪ್ರಕಟಿಸುವ ಮೂಲಕ ಖಚಿತಪಡಿಸಿದ್ದಾರೆ. ರಿಷಬ್ ಕಚ್ಚೆ ಕಟ್ಟಿಕೊಂಡು ಗುರಾಣಿ ಹಿಡಿದುಕೊಂಡು ಏಕಾಗ್ರತೆಯಿಂದ ಕಳರಿ ಭಂಗಿಯಲ್ಲಿರುವ ಫೋಟೋ ವೈರಲ್ ಆಗಿದೆ.

ರಿಷಬ್ ಪ್ರಕಟಿಸಿರುವ ಫೋಟೋಗೆ ನೆಟ್ಟಿಗರು ಸಾಕಷ್ಟು ಸಂಖ್ಯೆಯಲ್ಲಿ ಕಾಮೆಂಟ್ ಮಾಡಿದ್ದಾರೆ. ಈ ಫೋಟೋ ನೋಡಿದ ಮೇಲೆ ನಮಗೆ ಕಾಂತಾರ ಚಾಪ್ಟರ್ 1 ರ ಮೇಲೆ ನಿರೀಕ್ಷೆ ಹೆಚ್ಚಾಗ್ತಿದೆ ಎಂದಿದ್ದಾರೆ. ಈ ಫೋಟೋವೊಂದೇ ಸಾಕು, ನೀವು ಯಾವ ಮಟ್ಟದಲ್ಲಿ ಸಿನಿಮಾ ನಿರ್ಮಾಣ ಮಾಡುತ್ತೀರಿ ಎಂದು ತಿಳಿದುಕೊಳ್ಳಲು ಎಂದು ಅಭಿಮಾನಿಗಳು ಕಾಮೆಂಟ್ ಮಾಡಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಡಿಬಾಸ್ ಫ್ಯಾನ್ಸ್ ರಮ್ಯಾ ಕದನಕ್ಕೆ ಶಿವಣ್ಣನ ಎಂಟ್ರಿ, ಹೇಳಿದ್ದೇನು ಗೊತ್ತಾ

ಡಿ ಕಂಪನಿ ಅಲ್ಲ ಥೂ.. ಡುಬಾಕ್, ದಾವೂದ್ ಕಂಪನಿ ಅದು: ಡಿಬಾಸ್ ಫ್ಯಾನ್ಸ್ ವಿರುದ್ಧ ರೊಚ್ಚಿಗೆದ್ದ ಪ್ರಥಮ್

ರಮ್ಯಾ ಕಂಪ್ಲೇಂಟ್ ಬೆನ್ನಲ್ಲೇ ಚುರುಕಾದ ಪೊಲೀಸರು: ಡಿಬಾಸ್ ಫ್ಯಾನ್ಸ್ ಅಕೌಂಟ್ ಗೆ ಗುನ್ನ

ಸು ಫ್ರಮ್ ಸೋ ಮೂವಿ ಬಜೆಟ್ ಎಷ್ಟಿತ್ತು, ಗಳಿಸಿದ್ದೆಷ್ಟು ನೋಡಿದರೆ ಅಚ್ಚರಿಯಾಗ್ತೀರಿ

ಫಸ್ಟ್ ಟೈಂ ರಿಯಾಲಿಟಿ ಶೋ ಜಡ್ಜ್ ಆಗಿ ಅಮೂಲ್ಯ: ಬೆಸ್ಟ್ ಆಯ್ಕೆ ಎಂದ ನೆಟ್ಟಿಗರು

ಮುಂದಿನ ಸುದ್ದಿ
Show comments