Webdunia - Bharat's app for daily news and videos

Install App

ಸ್ವಾತಂತ್ರ್ಯೋತ್ಸವವನ್ನು ವಿಶಿಷ್ಟವಾಗಿ ಆಚರಿಸಿಕೊಂಡ ರಿಷಬ್ ಶೆಟ್ಟಿ: ನೀವೇ ನಿಜವಾದ ಕನ್ನಡಿಗ ಎಂದ ಫ್ಯಾನ್ಸ್

Krishnaveni K
ಶುಕ್ರವಾರ, 16 ಆಗಸ್ಟ್ 2024 (11:31 IST)
ಕುಂದಾಪುರ: ರಿಷಬ್ ಶೆಟ್ಟಿ ಏನೇ ಮಾಡುವುದಿದ್ದರೂ ವಿಶಿಷ್ಟವಾಗಿಯೇ ಮಾಡುತ್ತಾರೆ. ಅದಕ್ಕೆ ಈ ಬಾರಿ ಸ್ವಾತಂತ್ರ್ಯೋತ್ಸವ ಆಚರಣೆಯೂ ವಿಭಿನ್ನವಾಗಿಯೇ ಇತ್ತು.

ಕಾಂತಾರ ಚಾಪ್ಟರ್ 1 ಶೂಟಿಂಗ್ ಗಾಗಿ ರಿಷಬ್ ತಮ್ಮ ತವರು ಕುಂದಾಪುರದಲ್ಲಿ ಬೀಡು ಬಿಟ್ಟಿದ್ದಾರೆ. ನಿನ್ನೆ ಸ್ವಾತಂತ್ರ್ಯೋತ್ಸವವನ್ನೂ ರಿಷಬ್ ತಮ್ಮ ತವರಿನಲ್ಲಿಯೇ ಆಚರಿಸಿಕೊಂಡಿದ್ದಾರೆ. ಅದೂ ತಮ್ಮೂರು ಕೆರಾಡಿಯ ಸರ್ಕಾರಿ ಶಾಲೆಯಲ್ಲಿ ಮಕ್ಕಳೊಂದಿಗೆ ಆಚರಿಸಿಕೊಂಡಿದ್ದಾರೆ.

ಈ ಶಾಲೆಯನ್ನು ರಿಷಬ್ ಶೆಟ್ಟಿ ದತ್ತು ಪಡೆದುಕೊಂಡು ಅಭಿವೃದ್ಧಿ ಪಡಿಸಿದ್ದಾರೆ. ಆ ಮೂಲಕ ತಮ್ಮೂರಿನ ಶಾಲೆಗೆ ಕೊಡುಗೆ ನೀಡಿದ್ದಾರೆ. ಆದರೆ ಇಷ್ಟಕ್ಕೇ ಅವರು ನಿಲ್ಲಿಸಿಲ್ಲ. ಆಗಾಗ ಶಾಲೆಗೆ ಭೇಟಿ ಕೊಡುತ್ತಲೇ ಇರುತ್ತಾರೆ. ಆದರೆ ಈ ಬಾರಿ ಮಕ್ಕಳೊಂದಿಗೆ ತಾವೂ ಮಗುವಾಗಿ ಶಾಲೆಯಲ್ಲೇ ಸ್ವಾತಂತ್ರ್ಯೋತ್ಸವ ಆಚರಿಸಿದ್ದಾರೆ.

ಶಾಲೆಯ ಮೇಷ್ಟ್ರೊಂದಿಗೆ ತಾವೂ ನಿಂತು ರಾಷ್ಟ್ರಧ್ವಜಕ್ಕೆ ಗೌರವ ಸಲ್ಲಿಸಿದ್ದಾರೆ. ಈ ವಿಡಿಯೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ  ಹಂಚಿಕೊಂಡಿದ್ದಾರೆ. ರಿಷಬ್ ಸರ್ಕಾರಿ ಶಾಲೆಯಲ್ಲಿ ಸ್ವಾತಂತ್ರ್ಯೋತ್ಸವ ಆಚರಿಸಿರುವ ವಿಡಿಯೋ ನೋಡಿ ನೀವೇ ನಿಜವಾದ ಕನ್ನಡದ ಕಂದ ಎಂದು ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಕಾಂತಾರ ಸಿನಿಮಾ ಶೂಟಿಂಗ್‌ ಅವಘಡ ಸಂಬಂಧ ಹೊಂಬಾಳೆ ಫಿಲ್ಮ್ಸ್‌ ಸ್ಪಷ್ಟನೆ

Revanth Reddy: ಅಂದು ಜೈಲಿಗಟ್ಟಿದ್ದ ನಟನಿಗೆ ಇಂದು ಕೈಯಾರೆ ಕೊಡಬೇಕಾಯಿತು ಉತ್ತಮ ನಟ ಪ್ರಶಸ್ತಿ

ಕಾಂತಾರ ಪ್ರೀಕ್ವೆಲ್‌ ಚಿತ್ರೀಕರಣದ ವೇಳೆ ಮಗುಚಿದ ದೋಣಿ: ಅಪಾಯದಿಂದ ಪಾರಾದ ರಿಷಭ್‌ ಶೆಟ್ಟಿ ಮತ್ತು ತಂಡ

ಮೀಮ್ಸ್‌, ಟ್ರೋಲ್‌ಗಳು ನನ್ನನ್ನು ವ್ಯಾಖ್ಯಾನಿಸುವುದಿಲ್ಲ: ಕಾಲೆಳೆದ ನೆಟ್ಟಿಗರಿಗೆ ಬಿಪಾಶಾ ಕ್ಲಾಸ್‌

ಚಿತ್ರರಂಗದಿಂದ ಬ್ಯಾನ್ ಆಗಿದ್ದಕ್ಕೆ ಈ ಸ್ಟಾರ್ ನಟನ ಮೊರೆ ಹೋದ ಮಡೆನೂರು ಮನು

ಮುಂದಿನ ಸುದ್ದಿ
Show comments