ಸ್ಯಾಂಡಲ್‌ವುಡ್ ಬ್ಯೂಟಿ ರಾಗಿಣಿ ದ್ವಿವೇದಿ ಅಭಿನಯದ ಬಹುಭಾಷಾ ಚಿತ್ರ ’ಅಮ್ಮ’. ಈ ಚಿತ್ರದ ಕಥಾವಸ್ತು ತಮಿಳುನಾಡು ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರದು ಎನ್ನಲಾಗಿದೆ. ಆದರೆ ಈ ಚಿತ್ರದ ನಿರ್ಮಾಪಕ, ನಿರ್ದೇಶಕರು ಮಾತ್ರ ಈ ಬಗ್ಗೆ ಏನೂ ಹೇಳುತ್ತಿಲ್ಲ.
ರಾಗಿಣಿ ಮಾತ್ರ ಇದು ಅಮ್ಮ ಜೀವನ ಚರಿತ್ರೆ. ನಾನು ಅವರ ಪಾತ್ರದಲ್ಲಿ ಅಭಿನಯಿಸುತ್ತಿದ್ದೀನಿ ಎನ್ನುತ್ತಿದ್ದಾರೆ. ಫೈಸಲ್ ಸೈಫ್ ಆಕ್ಷನ್ ಕಟ್ ಹೇಳುತ್ತಿರುವ ಚಿತ್ರ ಇದು. ಇದೀಗ ಜಯಲಲಿತಾ ನಿಧನರಾದ ಮೇಲೆ ಚಿತ್ರವನ್ನು ರೀ ಶೂಟ್ ಮಾಡಲು ಹೊರಟಿದ್ದಾರೆ.
ಜಯಲಲಿತಾ ಅವರು ಆದಾಯಕ್ಕೆ ಮೀರಿ ಆಸ್ತಿ ಹೊಂದಿದ್ದ ಕೇಸಿಗೆ ಸಂಬಂಧಿಸಿದಂತೆ ಅರೆಸ್ಟ್ ಆಗಿದ್ದರು. ಆಗ ಚಿತ್ರೀಕರಣವನ್ನು ರೀ ಶೂಟ್ ಮಾಡಿದ್ದರು. ಇದೀಗ ಜಯ ಹಠಾತ್ ನಿಧನದಿಂದ ಮತ್ತೆ ರೀ ಶೂಟ್ ಮಾಡುತ್ತಿದ್ದಾರೆ. ಇದು ಜಯಲಲಿತಾ ಜೀವನಗಾಥೆ ಎಂಬುದಕ್ಕೆ ಇದಕ್ಕಿಂತ ಬಲವಾದ ಕಾರಣ ಇರಲಿಕ್ಕಿಲ್ಲ.
ತನ್ವಿ ಫಿಲಂಸ್ ಲಾಂಛನದಲ್ಲಿ ಸಿ.ಆರ್. ಮನೋಹರ್ ನಿರ್ಮಿಸುತ್ತಿರುವ ಈ ಚಿತ್ರ ಕನ್ನಡ, ತೆಲುಗು, ತಮಿಳು, ಮಲಯಾಳಂ ಮತ್ತು ಹಿಂದಿ ಭಾಷೆಗಳಲ್ಲಿ ರಿಲೀಸ್ ಆಗಲಿದೆ. ಹಾಟ್ ಬ್ಯೂಟಿ ರಾಗಿಣಿ ದ್ವಿವೇದಿ ಅಭಿನಯಿಸುತ್ತಿರುವುದು ಚಿತ್ರದ ಬಗ್ಗೆ ಸಾಕಷ್ಟು ಕುತೂಹಲ ಮೂಡಿಸಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.