Select Your Language

Notifications

webdunia
webdunia
webdunia
webdunia

ಸರಿಗಮಪ, ಡ್ರಾಮಾ ಜೂನಿಯರ್ ಮಕ್ಕಳಿಂದ ಮನರಂಜನೆ

ಸರಿಗಮಪ, ಡ್ರಾಮಾ ಜೂನಿಯರ್ ಮಕ್ಕಳಿಂದ ಮನರಂಜನೆ
Bangalore , ಬುಧವಾರ, 14 ಡಿಸೆಂಬರ್ 2016 (08:23 IST)
ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕು ಕುಕನೂರಿನ ಗುದ್ನೇಶ್ವರ ಸ್ವಾಮಿಯ ಮಹಾರಥೋತ್ಸವ ಡಿ.13 ರಂದು ಸಂಜೆ 04 ಗಂಟೆಗೆ ನೆರವೇರಲಿದ್ದು, ಇದರ ಅಂಗವಾಗಿ ಜರುಗಲಿರುವ ಜೀ-ಕನ್ನಡ ವಾಹಿನಿಯ ಸರಿಗಮಪ ದಲ್ಲಿ ಖ್ಯಾತಿ ಗಳಿಸಿದ ಗಾಯಕರು, ಡ್ರಾಮಾ ಜೂನಿಯರ್ ಲಿಟ್ಲ್‍ಚಾಂಪ್ಸ್ ಮಕ್ಕಳ ಮನರಂಜನೆಯಂತಹ ಆಕರ್ಷಕ ಕಾರ್ಯಕ್ರಮಗಳು ಇವೆ.
 
ಬಿನ್ನಾಳ ಗ್ರಾಮದ ಬಸವೇಶ್ವರ ದೇವಸ್ಥಾನ ನಂದಿಕೋಲ ಸೇವೆ ಹಾಗೂ ಕಕ್ಕಿಹಳ್ಳಿ ಗ್ರಾಮದ ಅಳಿಯ ಚನ್ನಬಸವೇಶ್ವರ ಪಲ್ಲಕ್ಕಿ ಸೇವೆ ಹಾಗೂ ಸಕಲ ವಾದ್ಯಗಳೊಂದಿಗೆ ಮಹಾರಥೋತ್ಸವವು ವೈಭವಯುತವಾಗಿ ನೆರವೇರಲಿದೆ. 
 
 ಮಹಾರಥೋತ್ಸವದ ಅಂಗವಾಗಿ ಡಿ.14 ರಿಂದ 16 ರವರೆಗೆ ಪ್ರತಿದಿನ ಸಂಜೆ 06 ಗಂಟೆಗೆ  ವಿವಿಧ ಸಾಂಸ್ಕøತಿಕ ಕಾರ್ಯಕ್ರಮಗಳು ಜರುಗಲಿವೆ.   ಡಿ. 14 ರಂದು ಸಂಜೆ ಶಾಲಾ ಕಾಲೇಜು ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ.  ರಾತ್ರಿ 10 ಗಂಟೆಗೆ ಅಳಿಯ ಚನ್ನಬಸವೇಶ್ವರ ಕಕ್ಕಿಹಳ್ಳಿ ಶ್ರೀ ಗುದ್ನೇಶ್ವರ ಹಾಗೂ ಬಿನ್ನಾಳ ಗ್ರಾಮದವರಿಂದ ‘ಕಡುಬಿನ ಕಾಳಗ’  ನಡೆಯಲಿದೆ.  
 
ಡಿ. 15 ರಂದು ಅಭಿನವ ನೃತ್ಯಾಲಯ ಕಲಾ ಸಂಘ ಕೊಪ್ಪಳ ಇವರಿಂದ ಭರತ ನಾಟ್ಯ ಹಾಗೂ ಸಿದ್ದಪ್ಪ ಬೀಳಗಿ ಇವರಿಂದ ತತ್ವ ಪದ ಮತ್ತು ಹಾಸ್ಯ ಸಂಪದ ಮತ್ತು ಝೀ ಟಿವಿ ಕನ್ನಡ ಚಾನೆಲ್ ಸರಿಗಮಪ ಲಿಟ್ಲ್‍ಚಾಂಪ್‍ನ ಮಲ್ಲೇಶ್ ಮತ್ತು ಡ್ರಾಮಾ ಜ್ಯೂನಿಯರ್‍ನ ಪುಟ್ಟರಾಜು ಇವರಿಂದ ಮನರಂಜನಾ ಕಾರ್ಯಕ್ರಮ ನಡೆಯಲಿದೆ. 
 
ಡಿ. 16 ರಂದು  ಜೀ ಟಿವಿ ಕನ್ನಡ ವಾಹಿನಿಯ ಸರಿಗಮಪ ಸೀಜನ್ 11 ನ ಖ್ಯಾತ ಗಾಯಕರುಗಳಾದ ಶ್ರೀರಾಮ ಕಾಸರ್, ಅಬ್ದುಲ್ ಖಾದರ್ (ನೈಜೀರಿಯ), ಸಹನಾ ಭಾರದ್ವಾಜ, ನಿತ್ಯಾ ಅನಂತಪೂರ ಇವರಿಂದ ಸಂಗೀತ ಕಾರ್ಯಕ್ರಮಗಳು ಜರುಗಲಿವೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ರಮೇಶ್ ಅರವಿಂದ್‌ಗೆ ’ಕ್ವೀನ್’ ಆಗೋರು ಯಾರು?