ಜೈಲಿನಲ್ಲಿ ಈಗ ದರ್ಶನ್ ಗ್ಯಾಂಗ್ ನಡುವೆಯೇ ವಾರ್ ಶುರು

Krishnaveni K
ಶನಿವಾರ, 20 ಜುಲೈ 2024 (10:43 IST)
ಬೆಂಗಳೂರು: ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ನಟ ದರ್ಶನ್ ಮತ್ತು ಗ್ಯಾಂಗ್ ನಡುವೆಯೇ ಈಗ ವಾರ್ ಶುರುವಾಗಿದೆ ಎಂಬ ಮಾತುಗಳು ಕೇಳಿಬರುತ್ತಿವೆ.

ದರ್ಶನ್ ಆಂಡ್ ಗ್ಯಾಂಗ್ ಕಳೆದ ಒಂದು ತಿಂಗಳಿನಿಂದ ಪರಪ್ಪನ ಅಗ್ರಹಾರ ಜೈಲಿನಲ್ಲಿ ನ್ಯಾಯಾಂಗ ಬಂಧನದಲ್ಲಿದೆ. ಡಿ ಗ್ಯಾಂಗ್ ವಿರುದ್ಧ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಪ್ರಬಲ ಸಾಕ್ಷ್ಯವನ್ನೇ ಸಂಗ್ರಹಿಸಿದ್ದಾರೆ. ಅವರಿಗೆ ಈಗ ಹೊರಗೆ ಬರುವುದು ಅಷ್ಟು ಸುಲಭವಲ್ಲ.

ಮೊನ್ನೆಯಷ್ಟೇ ಮತ್ತೆ ಆಗಸ್ಟ್ 1 ರವರೆಗೆ ನ್ಯಾಯಾಂಗ ಬಂಧನ ವಿಸ್ತರಿಸಲಾಗಿದೆ. ಅದಾದ ಬಳಿಕ ಜಾಮೀನಿಗೆ ಅರ್ಜಿ ಸಲ್ಲಿಸಬಹುದಾದರೂ ಆಗಲೂ ಜಾಮೀನು ಸಿಗುವುದು ಕಷ್ಟವೇ. ಹೀಗಾಗಿ ದರ್ಶನ್ ತಮ್ಮ ಸಂಗಡಿಗ ಪ್ರದೋಶ್ ಮೇಲೆ ಅಸಮಾಧಾನ ಹೊರಹಾಕಿದ್ದಾರೆ ಎನ್ನಲಾಗಿದೆ.

ಎಲ್ಲಾ ನಿನ್ನಿಂದಲೇ ಆಗಿದ್ದು ಎಂದು ಪ್ರದೋಶ್ ಮೇಲೆ ಕೂಗಾಡಿದ್ದಾರಂತೆ. ಇದಕ್ಕೆ ಪ್ರದೋಶ್ ಕೂಡಾ ತಿರುಗೇಟು ನೀಡಿದ್ದಾರೆ. ಇಬ್ಬರ ನಡುವೆ ಭಿನ್ನಾಭಿಪ್ರಾಯಗಳಾದ ಬಳಿಕ ಪ್ರದೋಶ್ ಇತರೆ ಆರೋಪಿಗಳ  ಬೆಂಬಲ ಪಡೆಯಲು ಪ್ರಯತ್ನಿಸಿದ್ದಾರೆ. ರೇಣುಕಾಸ್ವಾಮಿ ಸಾವಿನ ಬಳಿಕ ಆತನ ಶವವನ್ನು ಎಸೆಯಲು ಪ್ಲ್ಯಾನ್ ಮಾಡಿದ್ದು ಇದೇ ಪ್ರದೋಶ್. ಆತನಿಗೆ ದರ್ಶನ್ 30 ಲಕ್ಷ ರೂ. ಹಣವನ್ನು ನೀಡಿದ್ದರು ಎನ್ನಲಾಗಿದೆ. ಇದೀಗ ದರ್ಶನ್ ಮತ್ತು ಪ್ರದೋಶ್ ನಡುವೆಯೇ ಕಿತ್ತಾಟವಾದ ಮಾತು ಕೇಳಿಬರುತ್ತಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

BB 12: ಕಿಚ್ಚ ಸುದೀಪ್ ಇದು ಸಾಕಗಲ್ಲ, ಇನ್ನೂ ಬೇಕು, ಇನ್ನೂ ಬೇಕು

ಜೈಲಿನಲ್ಲಿ ನಿಯಮದ ಪ್ರಕಾರ ಎಲ್ಲಾ ಕೊಟ್ಟರೂ ಇಲ್ಲ ಅಂದರಾ ದರ್ಶನ್

BBK12: ಕಿಚ್ಚ ಸುದೀಪ್ ಯಾರಿಗೂ ಹೆದರಲ್ಲ, ಅಶ್ವಿನಿ ಪರವೂ ಅಲ್ಲ: ಇಂದು ಕಾದಿದೆ ಮಾರಿಹಬ್ಬ

ಕೆಬಿಸಿ ಶೋನಲ್ಲಿ ರಿಷಬ್ ಶೆಟ್ಟಿ ಗೆದ್ದಿದ್ದೆಷ್ಟು, ಈ ಹಣ ಯಾರಿಗೆ ಕೊಟ್ರು ನೋಡಿ

ಕಲಾವಿದ ನಿತಿನ್ ಶೀವಾಂಶ್ ಜತೆ ಸುಹಾನಾ ಸೈಯ್ಯದ್‌ಗೆ ಪ್ರೀತಿ ಶುರುವಾಗಿದ್ದು ಹೇಗೇ ಗೊತ್ತಾ

ಮುಂದಿನ ಸುದ್ದಿ
Show comments