Renukaswamy Case: ತಿಂಗಳ ಬಳಿಕ ದರ್ಶನ್ ಕಂಡಿದ್ದು ಹೀಗೇ

Sampriya
ಸೋಮವಾರ, 3 ನವೆಂಬರ್ 2025 (17:06 IST)
Photo Credit X
ಬೆಂಗಳೂರು: ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಎರಡನೇ ಭಾರೀ ಜೈಲು ಸೇರಿರುವ ನಟ ದರ್ಶನ್ ಅವರು ಇದೀಗ ತಿಂಗಳ ಬಳಿಕ ಕಾಣಿಸಿಕೊಂಡಿದ್ದಾರೆ. ಇಂದು ಕೋರ್ಟ್ ವಿಚಾರಣೆಯಿದ್ದ ಕಾರಣ ಪ್ರಕರಣದ ಎಲ್ಲ ಆರೋಪಿಗಳನ್ನು ಹಾಜರುಪಡಿಸಲಾಯಿತು. 

ಎರಡನೇ ಭಾರೀ ಜೈಲು ಸೇರಿರುವ ದರ್ಶನ್‌, ಅಲ್ಲಿನ ಸಂಕಷ್ಟವನ್ನು ಅನುಭವಿಸಲು ಸಾಧ್ಯವಾಗುತ್ತಿಲ್ಲ ಎಂದು ತಮ್ಮ ಅಳಲನ್ನು ವಕೀಲರ ಮುಂದೆ ತೋಡಿಕೊಂಡಿದ್ದರು. 

ಆರೋಗ್ಯಕ್ಕೂ ಪರಿಣಾಮ ಬೀರುತ್ತಿದೆ ಎಂದಿದ್ದರು. ಇನ್ನೂ ತಿಂಗಳ ಬಳಿಕ ದರ್ಶನ್ ಕಾಣಿಸಿಕೊಂಡಿದ್ದಾರೆ. 

ಪೊಲೀಸ್ ಬಂದೋಬಸ್ತ್‌ನಲ್ಲಿ ಕೋರ್ಟ್‌ಗೆ ಬಂದ ದಾಸ, ಸಪ್ಪೆ ಮುಖದಲ್ಲೇ ವಾಹನದಲ್ಲಿ ಕೂತಿದ್ದರು. ಇನ್ನೂ ವಾಹನದಿಂದ ಇಳಿಯುತ್ತಿದ್ದ ಹಾಗೇ ಅಲ್ಲೇ ಇದ್ದ ಪೊಲೀಸ್‌ ಸಿಬ್ಬಂದಿ ಜತೆ ಮಾತನಾಡುತ್ತಾ, ಕೋರ್ಟ್‌ಗೆ ಪ್ರವೇಶಿಸಿದರು. ತೂಕ ಇಳಿಕೆಯಾಗಿದ್ದರಿಂದ ನಟ ದರ್ಶನ್ ಸೊರಗಿದ ಹಾಗೇ ಕಾಣಿಸುತ್ತದೆ. 

ಇನ್ನೂ ಕೋರ್ಟ್ ವಿಚಾರಣೆ ಮುಗಿಸಿ ವಾಪಾಸ್ಸಾಗುತ್ತಿದ್ದಾಗ ಅಭಿಮಾನಿಗಳು ಡಿಬಾಸ್ ಡಿಬಾಸ್ ಎಂಧು ಕೂಗಿದಾಗ ನಗುತ್ತಲೇ ಕೈ ಬೀಸಿದ್ದಾರೆ. 

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

Renukaswamy Case: ತಿಂಗಳ ಬಳಿಕ ದರ್ಶನ್ ಕಂಡಿದ್ದು ಹೀಗೇ

Darshan Court Case Hearing: ಮುಕ್ತಾಯಗೊಂಡ ದೋಷಾರೋಪ, ಇಲ್ಲಿದೆ ಮಹತ್ವದ ಅಪ್ಡೇಟ್

ಕೋರ್ಟ್ ಹಾಲ್ ನಲ್ಲಿ ಸುಬ್ಬ ಮೀಟ್ಸ್ ಸುಬ್ಬಿ: ದರ್ಶನ್ ನೋಡಿ ಪವಿತ್ರಾ ಗೌಡ ಮಾಡಿದ್ದೇನು

ದರ್ಶನ್ ಫ್ಯಾನ್ಸ್ ನಿಂದ ನ್ಯಾಯಾಧೀಶರೇ ಗರಂ: ಮಹತ್ವದ ತೀರ್ಮಾನಕ್ಕೆ ಸಿದ್ಧತೆ video

ಕಾಂಚನಾ ಭಾಗ 4ರಲ್ಲಿ ಚಾನ್ಸ್‌ ಗಿಟ್ಟಿಸಿಕೊಂಡ ಪೂಜಾ ಹೆ‌ಗ್ಡೆ, ಬಾಲಿವುಡ್ ನಟಿಗೂ ಬಿಗ್ ರೋಲ್‌

ಮುಂದಿನ ಸುದ್ದಿ
Show comments