ಜೈಲು ಸೇರುತ್ತಿದ್ದರೂ ಒಂಚೂರು ಬದಲಾಗದ ಪವಿತ್ರಾ ಗೌಡ ವರಸೆ, ಸುಬ್ಬಿ ಗರಂ ಆಗಿದ್ಯಾಕೆ

Sampriya
ಗುರುವಾರ, 14 ಆಗಸ್ಟ್ 2025 (15:46 IST)
ಬೆಂಗಳೂರು: ರೇಣುಕಾಸ್ವಾಮಿ ಹತ್ಯೆ ಪ್ರಕರಣಕ್ಕೆ ಸಂಬಂಧ ಎ1 ಆರೋಪಿ ಪವಿತ್ರಾ ಗೌಡ ಅವರನ್ನು ಪೊಲೀಸರು ಈಗಾಗಲೇ ವಶಕ್ಕೆ ಪಡೆದಿದ್ದಾರೆ.ವಶಕ್ಕೆ ಪಡೆಯಲು ಪವಿತ್ರಾ ಮನೆಗೆ ಪೊಲೀಸರು ಹೋಗುತ್ತಿದ್ದ ಹಾಗೇ ಆಕೆ ಕೆಲವೊಂದು ವಿಚಾರಕ್ಕೆ ವಿರೋಧ ವ್ಯಕ್ತಪಡಿಸಿರುವುದು ಇದೀಗ ತಿಳಿದುಬಂದಿದೆ. 

ರೇಣುಕಾಸ್ವಾಮಿ ಹತ್ಯೆ ಪ್ರಕರಣ ಸಂಬಂಧ ಈ ಹಿಂದೆಯೂ ಪೊಲೀಸರು ಅರೆಸ್ಟ್‌ ಬಂದಿದ್ದ ವೇಳೆ ಮಾಧ್ಯಮದವರ ಮುಂದೇ ತಮ್ಮ ಅಹಂ ಅನ್ನು ತೋರಿಸಿದ್ದರು. ತನ್ನ ವಿಚಾರವಾಗಿ ಒಂದು ವ್ಯಕ್ತಿಯ ಕೊಲೆ ನಡೆದಿದೆ ಎಂದು ಗಂಭೀರ ಪ್ರಕರಣ ನಡೆದಿದ್ದರು, ಪೊಲೀಸರು ಅರೆಸ್ಟ್ ಮಾಡಲು ಬಂದಾಗ ಮೆಟ್ಟಿಲು ಇಳಿದುಕೊಂಡು ಬರುತ್ತಿರುವ ವೇಳೆ ಅಹಂಕಾರದ ನಡವಳಿಕೆಯನ್ನು ತೋರಿಸಿದ್ದರು. ಇದು ಭಾರೀ ಟೀಕೆಗೂ ಗುರಿಯಾಗಿತ್ತು.

ಇಂದು ಜಾಮೀನು ಅರ್ಜಿ ವಜಾ ಮಾಡಿ  ಸುಪ್ರೀಂ ಕೋರ್ಟ್‌ 7 ಮಂದಿ ಆರೋಪಿಗಳನ್ನು ಬಂಧಿಸುವಂತೆ ಸೂಚಿಸಿದ ಬೆನ್ನಲ್ಲೇ ಪೊಲೀಸರು ಪವಿತ್ರಾ ಮನೆಗೆ ಹೋಗಿದ್ದಾರೆ. 

ಈ ವೇಳೆ ವಕೀಲರನ್ನು ಮುಂದಿಟ್ಟು ಹಲವು ಪ್ರಶ್ನೆಗಳನ್ನು ಪವಿತ್ರಾ ಕೇಳಿದ್ದಾಳೆ. ಈ ವೇಳೆ ಸುಪ್ರೀಂ ಕೋರ್ಟ್ ಆದೇಶ ಪ್ರತಿ ಹಾಗೂ ಅರೆಸ್ಟ್‌ ಪ್ರತಿ ನೋಡಿ ಪವಿತ್ರಾ ಪೊಲೀಸರ ಜತೆ ತೆರಳಲು ಸುಮ್ಮನಾಗಿದ್ದಾಳೆ.

ಇನ್ನೂ ಮೆಟ್ಟಿಲು ಇಳಿದು ಬರುವ ವಿಡಿಯೋವನ್ನು ಪೊಲೀಸರು ಮಾಡಲು ಹೋದಾಗ ಅದರಿಂದ ಕೋಪಗೊಂಡ ಪವಿತ್ರಾ ತಲೆ ಚಚ್ಚಿಕೊಂಡು, ತಕಾರು ಎತ್ತಿದ್ದಾಳೆ. ಗುನುಗುತ್ತಲೇ ಮೆಟ್ಟಿಲು ಇಳಿದು ಬಂದು ಟೆಕ್ಷನ್‌ನಲ್ಲಿಯೇ ಪೊಲೀಸ್ ಜೀಪು ಹತ್ತಿದ್ದಾಳೆ. <>

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಚೆನ್ನಾಗಿದ್ದೀರಾ ಅಂಕಲ್‌, ದರ್ಶನ್ ಪುತ್ರನ ಮುಗ್ಧತೆಗೆ ಶಿವಣ್ಣನ ಪ್ರೀತಿಯಾ ಮಾತು

ಮೂರನೇ ದಾಂಪತ್ಯಕ್ಕೂ ಅಂತ್ಯ ಹಾಡಿದ ಖ್ಯಾತ ನಟಿ ಮೀರಾ ವಾಸುದೇವನ್

BBK12: ಗಿಲ್ಲಿ ಮೇಲೆ ಕೇಸ್, ಮನೆಯಲ್ಲೂ ಕಿರಿಕ್, ಚಾರ್ಮ್ ಕಳೆದುಕೊಳ್ಳುತ್ತಿದ್ದಾರಾ ಗಿಲ್ಲಿ

BBK12: ರಕ್ಷಿತಾಳಂತಹ ಪಾಪದವರನ್ನು ಬೈತೀರಿ, ಅಶ್ವಿನಿ ಗೌಡಗೆ ಬೈಯಲು ನಿಮಗೆ ಧೈರ್ಯ ಇಲ್ವಾ ಕಿಚ್ಚ ಸುದೀಪ್

ಮುಂದಿನ ಸುದ್ದಿ
Show comments